ಹಿರಿಯ ನಟಿ ಕಿಶೋರಿ ಬಲ್ಲಾಳ್ ಇನ್ನಿಲ್ಲ

Share

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟಿ ಕಿಶೋರಿ ಬಲ್ಲಾಳ್ ಅವರು ಮಂಗಳವಾರ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕೆಲವು ದಿನಗಳಿಂದ ಅವರು ಉಸಿರಾಟ ತೊಂದರೆಯಿಂದ ಬಳಲುತ್ತಿದ್ದರು.

ರಂಗಭೂಮಿ ಕಲಾವಿದೆಯಾಗಿ ಬೆಳಕಿಗೆ ಬಂದಿದ್ದ ಕಿಶೋರಿ ಬಲ್ಲಾಳ್ ಸುಮಾರು 72ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. 1960ರಲ್ಲಿ ಇವಳೆಂಥಾ ಹೆಂಡತಿ ಚಿತ್ರದ ಮೂಲಕ ಬೆಳಕಿಗೆ ಬಂದರು.

ವೀರಬಾಹು, ಹನಿ ಹನಿ, ಸೂರ್ಯಕಾಂತಿ, ನಾನಿ, ನನ್ನುಸಿರೇ, ಕಹಿ, ಶಿವಗಾಮಿ, ಅಕ್ಕತಂಗಿ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

2004ರಲ್ಲಿ ತೆರೆಕಂಡ ಹಿಂದಿಯ ‘ಸ್ವದೇಶ್’ ಚಿತ್ರದಲ್ಲಿ ಶಾರೂಖ್ ತಾಯಿಯಾಗಿ ಕಿಶೋರಿ ಬಲ್ಲಾಳ್ ನಟಿಸಿದ್ದರು.