ಹಾವೇರಿ: ಕೋವಿಡ್ 19ನಿಂದ ಐವರು ಗುಣಮುಖ, ಆಸ್ಪತ್ರೆಯಿಂದ ಬಿಡುಗಡೆ

Share

ಹಾವೇರಿ: ಕೋವಿಡ್ 19 ಸೋಂಕಿನಿಂದ ಗುಣಮುಖರಾಗಿರುವ ಐವರನ್ನು ಸೋಮವಾರ ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಜಿಲ್ಲೆಯ ರಾಣೆಬೆನ್ನೂರ ತಾಲ್ಲೂಕ ತುಮ್ಮಿನಕಟ್ಟಿಯ 11 ವರ್ಷದ ಓರ್ವ ಬಾಲಕಿ (P-2859), 19 ವರ್ಷ ಯುವಕ (P-2856), 13 ವರ್ಷ ಬಾಲಕ (P-2857), 15 ವರ್ಷ ಬಾಲಕ (P-2858) ಹಾಗೂ ಶಿಗ್ಗಾಂವಿಯ 57 ವರ್ಷದ (P-3271) ಓರ್ವ ವ್ಯಕ್ತಿ ಗುಣಮುಖರಾಗಿರುವ ಕುರಿತು ಪ್ರಯೋಗಾಲಯದ ವರದಿ ಬಂದ ಹಿನ್ನಲೆಯಲ್ಲಿ ಬಿಡುಗಡೆ ಮಾಡಲಾಗಿದೆ.

ಈವರೆಗೆ ಜಿಲ್ಲೆಯಲ್ಲಿ ಒಟ್ಟು 21 ಕೋವಿಡ್ 19 ಪ್ರಕರಣಗಳು ಪತ್ತೆಯಾಗಿದ್ದು, 11 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ 10 ಸಕ್ರಿಯ ಪ್ರಕರಣಗಳು ಇವೆ.