ಸೆಪ್ಟೆಂಬರ್ 1 ರಿಂದ ಮತದಾರರ ಪರಿಶೀಲನೆ ಕಾರ್ಯಕ್ರಮ

Share

ಹಾವೇರಿ: ಭಾರತ ಚುನಾವಣಾ ಆಯೋಗವು ಸನ್-2020ರ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ಪೂರ್ವ ಪರಿಷ್ಕರಣೆ ಚಟುವಟಿಕೆಯಾಗಿ ಜಿಲ್ಲೆಯಾದ್ಯಂತ ನಾಗರಿಕರಿಗೆ ಸುವರ್ಣಾವಕಾಶ ಕಲ್ಪಿಸಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತೆಗೆದು ಹಾಕುವಿಕೆ, ಪರಿಶೀಲನೆ ಮತ್ತು ಧೃಡೀಕರಣ ಹಾಗೂ ವಿವಿಧ ನ್ಯೂನ್ಯತೆಗಳೇನಾದರೂ ಇದ್ದರೆ ಅವುಗಳನ್ನು ತಿದ್ದುಪಡಿ ಮಾಡಿಕೊಳ್ಳಲು ದಿನಾಂಕ 01-09-2019 ರಿಂದ 15-10-2019ರ ವರೆಗೆ ‘’ಮತದಾರರ ಪರಿಶೀಲನೆ ಕಾರ್ಯಕ್ರಮ’’ ಜರುಗಿಸಲು ವೇಳಾಪಟ್ಟಿ ನಿಗದಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.

ಮತದಾರರ ಪರಿಶೀಲನೆ ಕಾರ್ಯಕ್ರಮದ ಚಾಲನೆ ಸೆಪ್ಟೆಂಬರ್ 1 ರಂದು ರವಿವಾರ ಮುಂಜಾನೆ 11-00 ಗಂಟೆಗೆ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಜರುಗಲಿದೆ ಎಂದು ತಿಳಿಸಿದ್ದಾರೆ.

ಮತದಾರರು ತಮ್ಮ ದಾಖಲೆಗಳಾದ ಭಾರತೀಯ ಪಾಸಪೋರ್ಟ್, ಚಾಲನಾ ಪರವಾನಿಗೆ, ಆಧಾರ ಪತ್ರ, ಪಡಿತರ ಚೀಟಿ, ಸರ್ಕಾರಿ/ಅರೆ ಸರ್ಕಾರಿ ನೌಕರರು ಹೊಂದಿರುವ ಗುರುತಿನ ಚೀಟಿ, ಬ್ಯಾಂಕ್ ಪಾಸ್‍ಬುಕ್, ರೈತರ ಗುರುತಿನ ಚೀಟಿ ಮತ್ತು ಚುನಾವಣಾ ಆಯೋಗ ಅನುಮೋದಿಸಿರುವ ಯಾವುದೇ ಇತರೆ ದಾಖಲೆಗಳು ಇವುಗಳಲ್ಲಿ ಯಾವುದಾದರೂ ಒಂದು ದಾಖಲೆಯೊಂದಿಗೆ ನಿಮ್ಮ ಹತ್ತಿರದ ಕೇಂದ್ರಗಳಾದ ಸಾಮಾನ್ಯ ಸೇವಾ ಕೇಂದ್ರ, ಮತದಾರರ ನೊಂದಣಾಧಿಕಾರಿಗಳ ಕಛೇರಿ, ಬೆಂಗಳೂರು-1/ಕರ್ನಾಟಕ-1 ಕೇಂದ್ರ, ಅಟಲ್ ಜನ ಸ್ನೇಹಿ ಕೇಂದ್ರ, ಬಾಪೂಜಿ ಸೇವಾ ಕೇಂದ್ರ(ಗ್ರಾಮ ಪಂಚಾಯತಿ) ಮತ್ತು ಮತಗಟ್ಟೆ ಅಧಿಕಾರಿಗಳು (ಬಿಎಲ್‍ಓ)ರವರು ಮನೆಮನೆಗೆ ಭೇಟಿ ನೀಡುವವರಿದ್ದು ಅವರ ಭೇಟಿ ನೀಡಿದ ಸಮಯದಲ್ಲಿ ಹಾಜರಿಪಡಿಸುವುದು. ಇನ್ನು ನಾಗರಿಕರು ವೆಬ್‍ಸೈಟ್ ‘’Voter Helpline’’ Mobile App, New NVSP Portal (www.nvsp.in) ಅಥವಾ 1950 ಟೊಲ್ ಫ್ರೀ ಮತದಾರರ ಸಹಾಯ ಕೇಂದ್ರದ ಮೂಲಕವು ಪರಿಶೀಲಿಸಿ ಧೃಡೀಕರಿಸಿಕೊಳ್ಳುವುದು.

ಸಾರ್ವಜನಿಕರು ನಿಮ್ಮ ಹೆಸರು ಮತ್ತು ವಿವರಗಳನ್ನು ಮತದಾರರ ಪಟ್ಟಿಯಲ್ಲಿ ಇದೆಯೇ, ಪರಿಶೀಲಿಸಿಕೊಳ್ಳಿ ಇರದಿದ್ದಲ್ಲಿ, ನಗದಿತ ನಮೂನೆ-6ರಲ್ಲಿ ಹೆಸರು ಸೇರ್ಪಡೆ, ನಮೂನೆ-7ರಲ್ಲಿ ತೆಗೆದುಹಾಕಲು, ನಮೂನೆ-8ರಲ್ಲಿ ತಿದ್ದುಪಡಿ ಮತ್ತು ನಮೂನೆ-8ಎ ರಲ್ಲಿ ಒಂದುಸ್ಥಳ ದಿಂದ ಬೇರೆ ಸ್ಥಳಕ್ಕೆ ವರ್ಗಾಯಿಸಿಕೊಳ್ಳು ಅರ್ಜಿಗಳನ್ನು ಸಲ್ಲಿಸಿ ಈ ಸುವರ್ಣಾವಕಾಶವನ್ನು ಸದೋಪಯೋಗ ಪಡಿಸಿಕೊಳ್ಳಲು ಕೋರಲಾಗಿದೆ.