ಅವಿರೋಧ ಆಯ್ಕೆ

Share

ಹಾವೇರಿ: ಜಿಲ್ಲಾ ಕೈಗಾರಿಕಾ ಸರಬರಾಜು ಮತ್ತು ಮಾರಾಟ ಸಹಕಾರ ಸಂಘಕ್ಕೆ ಐದು ವರ್ಷದ ಅವಧಿಗೆ ನಿರ್ದೇಶಕ ಮಂಡಳಿಗೆ ಶುಕ್ರವಾರ ಜರುಗಿದ ಚುನಾವಣೆಯಲ್ಲಿ  ಅಧ್ಯಕ್ಷರಾಗಿ ಸಂಜೀವಕುಮಾರ ನೀರಲಗಿ ಹಾಗೂ ಉಪಾಧ್ಯಕ್ಷರಾಗಿ ಶಿವಪ್ರಕಾಶ ಹಿರೇಮಠ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಭರಮಪ್ಪ ನವಲಗುಂದ, ಮಂಜುನಾಥ ಕ.ಪಂಚಾನನ, ಹನುಮಂತಪ್ಪ ಜೋಗಾರ, ಶಾಂತಪ್ಪ ಬುಡುಮಣ್ಣನವರ, ಸುಮಂಗಲಾ ಹೆಸರೂರು ಇವರುಗಳು ನಿರ್ದೇಶಕರುಗಳಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಎಸ್.ಜಿ.ಸುಣಗಾರ ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಸಂತೋಷಕುಮಾರ ಮಾಡಳ್ಳಿ ಅವರು ಕಾರ್ಯನಿರ್ವಹಿಸಿದ್ದಾರೆ ಎಂದು ವ್ಯವಸ್ಥಾಪಕರು ನಿರ್ದೇಶಕರು ತಿಳಿಸಿದ್ದಾರೆ.