“ಬನಾಯೆಂಗೆ ಮಂದಿರ್ ಹಾಡು ನಿಷೇಧ ಹಿಂಪಡೆಯಿರಿ: ನೀಲಕಂಠ ಕಂದಗಲ್

Share

ವಿಜಯಪುರ: “ಬನಾಯೆಂಗೆ ಮಂದಿರ್ ಹಾಡು ನಿಷೇಧ ಹಿಂಪಡೆಯುವಂತೆ ಶ್ರೀರಾಮ ಸೇನೆಯ ಮುಖಂಡ ನೀಲಕಂಠ ಕಂದಗಲ್ ಆಗ್ರಹಿಸಿದ್ದಾರೆ.

ವಿಜಯಪುರ ಜಿಲ್ಲಾಧಿಕಾರಿ ಈ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅವರು ಹಿಂದೂಗಳ ಆರಾಧ್ಯ ದೈವ ರಾಮನ ಹಾಡಿಗೆ ನಿಷೇಧ ಯಾಕೆ ಎಂದು ಪ್ರಶ್ನಿಸಿದ್ದಾರೆ.

ವಿಜಯಪುರ ಜಿಲ್ಲಾಧಿಕಾರಿಗಳು ತಗೆದುಕೊಂಡ ತಪ್ಪು ನಿರ್ಧಾರ ಆಡಳಿತ ನಡೆಸುತ್ತಿರುವ ಸರ್ಕಾರದ ಮೇಲೆ ಇದರ ಪರಿಣಾಮ ಆಗುತ್ತದೆ. ತಮ್ಮ ಆಡಳಿತದ ಸಂದರ್ಭದಲ್ಲಿ ಇಂತಹ ಕೆಟ್ಟ ಹಿಂದೂ ವಿರೋಧಿ ನಿರ್ಧಾರಗಳಾಗದಂತೆ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು.

ಬನಾಯೆಂಗೆ ಮಂದಿರ್ ಹಾಡಿನ ನಿಷೇಧ ಹಿಂಪಡೆದು ಹಿಂದುಗಳು ಮುಕ್ತವಾಗಿ ಹಾಡು ಹಚ್ಚಿ ಸಂಭ್ರಮಪಡಲು ಅನುಕೂಲವಾಗುವಂತೆ ಮಾಡಬೇಕೆಂದು ಪ್ರಕಟಣೆ ಮೂಲಕ ಆಗ್ರಹಿಸಿದರು.

ಹಿನ್ನಲೆ: ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಗಣೇಸ ಹಬ್ಬದ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಅಗಸ್ಟ್ 28 ರಂದು ಬನಾಯೆಂಗೆ ಮಂದಿರ ಹಿಂದಿ ಹಾಡನ್ನು ನಿಷೇಧ ಮಾಡಿ ಆದೇಶ ಹೊರಡಿಸಿದ್ದರು.