ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಕಿಡಿಗೆಡಿಗಳ ಬಂಧನಕ್ಕೆ ಆಗ್ರಹ

Share

ಸವಣೂರ : ಬಂಜಾರ(ಲಂಬಾಣಿ) ಭೋವಿ, ಕೊರಚ, ಕೊರಮ ಜಾತಿಗಳನ್ನು ಪರಿಶಿಷ್ಠ ಮೀಸಲಾತಿ ಪಟ್ಟಿಯಿಂದ ಹೊರಗಿಡುವಂತೆ ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿದೆ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ವದಂತಿ ಹಬ್ಬಿಸುತ್ತಿರುವ ಕಿಡಿಗೆಡಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೃಷ್ಣಾಪುರ ಬಂಜಾರ ಸಮಾಜದ ಪೀಠಾಧ್ಯಕ್ಷಷರಾದ ಕುಮಾರ ಶ್ರೀ ಒತ್ತಾಯಿಸಿದ್ದಾರೆ.

ನಗರದ ಅಂಚೆ ಕಚೇರಿ ಬಳಿ ತಾಲ್ಲೂಕು ಬಂಜಾರ ಸಮಾಜದ ವತಿಯಿಂದ ಬುಧವಾರ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪತ್ರ ಚಳುವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಲಂಬಾಣಿ ಸಮಾಜ ಬಹಳಷ್ಟು ಹಿಂದುಳಿದ ಸಮಾಜವಾಗಿರುವದರಿಂದ ನಮ್ಮ ಪತ್ರ ಚಳುವಳಿಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಸ್ಪಂದಿಸಬೇಕು. ಇದೇ ರೀತಿ ಸುಳ್ಳು ವದಂತಿಗಳು ಮುಂದುವರೆದಲ್ಲಿ ಉಗ್ರವಾದ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬಂಜಾರ ಸಮಾಜದ ತಾಲೂಕಾಧ್ಯಕ್ಷ ತೂಕಾರಾಮ ನಾಯಕ ಮಾತನಾಡಿ, ಸಮಾಜದ ಪ್ರತಿ ಮನೆ ಮನೆಗಳಿಂದ ತಾಲ್ಲೂಕಿನಾದ್ಯಂತ ಬೃಹತ್ ಪತ್ರ ಚಳುವಳಿಯನ್ನು ಹಮ್ಮಿಕೊಳ್ಳಲಾಗಿದ್ದು, ರಾಜ್ಯಾದ್ಯಂತ ಪತ್ರ ಚಳುವಳಿ ನಡೆಸಲಿದ್ದೇವೆ. ಸರ್ಕಾರ ಬಂಜಾರ(ಲಂಬಾಣಿ) ಭೋವಿ, ಕೊರಚ, ಕೊರಮ ಈ ನಾಲ್ಕು ಜಾತಿಗಳನ್ನು ಪರಿಶಿಷ್ಠ ಮೀಸಲಾತಿ ಪಟ್ಟಿಯಿಂದ ತೆಗೆದು ಹಾಕುವ ಪ್ರಯತ್ನವನ್ನು ಕೈ ಬಿಡಬೇಕು. ಸಾಮಾಜಿಕ ಜಾಲ ತಾಣಗಳಲ್ಲಿ ಸುಳ್ಳು ವದಂತಿ ಹರಡುತ್ತಿರುವ ಕಿಡಗೇಡಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಪ್ರಕಾಶ ಲಮಾಣಿ, ಶಂಕ್ರಪ್ಪ ಲಮಾಣಿ, ನೂರಪ್ಪ ಲಮಾಣಿ, ಸೋಮಣ್ಣ ಲಮಾಣಿ, ಹನಮಂತಪ್ಪ ಲಮಾಣಿ, ಮಾನು ಲಮಾಣಿ, ಹನಮಂತಪ್ಪ ದೊಡ್ಡಮನಿ, ಕುಮಾರ ಲಕ್ಕಮಪ್ಪ ಲಮಾಣಿ ಸೇರಿದಂತೆ ಇತರರು ಇದ್ದರು.