ಹಾವೇರಿ: ಕೋವಿಡ್ 19 ಸೋಂಕಿನಿಂದ ಮೂವರು ಗುಣಮುಖ, ಆಸ್ಪತ್ರೆಯಿಂದ ಬಿಡುಗಡೆ

Share

ಹಾವೇರಿ: ಕೋವಿಡ್ 19 ಸೋಂಕಿನಿಂದ ಗುಣಮುಖರಾದ ಎರಡು ವರ್ಷ ವರ್ಷದ ಬಾಲಕ ಸೇರಿದಂತೆ ಒಟ್ಟು ಮೂವರು ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಬುಧವಾರ ಬಿಡುಗಡೆ ಹೊಂದಿದ್ದಾರೆ.

ಈವರೆಗೆ ಜಿಲ್ಲೆಯಲ್ಲಿ ಪತ್ತೆಯಾದ 21 ಸೋಂಕಿತ ಪ್ರಕರಣಗಳಲ್ಲಿ 14 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 7 ಪ್ರಕರಣ ಸಕ್ರಿಯವಾಗಿವೆ.

ತುಮ್ಮಿನಕಟ್ಟಿ ಮೂಲದ ಎರಡು ವರ್ಷ ವರ್ಷದ ಬಾಲಕ P- 2494, 28 ವರ್ಷದ ಮಹಿಳೆ P- 2496 ಹಾಗೂ 22 ವರ್ಷದ P- 2497 ಗುಣಮುಖರಾಗಿ ಆಸ್ಪತ್ರೆಯಿಂದ ಇಂದು ಬಿಡುಗಡೆ ಹೊಂದಿದ್ದಾರೆ. ಈ ಎಲ್ಲರೂ ಮಹಾರಾಷ್ಟ್ರ ರಾಜ್ಯದಿಂದ ಜಿಲ್ಲೆಗೆ ಬಂದು ಸಾಂಸ್ಥಿಕ ಕ್ವಾರಂಟೈನ್‍ಗೆ ಒಳಗಾಗಿದ್ದರು.