ರಾಜ್ಯದ ಒಂಭತ್ತು ಜಿಲ್ಲೆಗಳು ಮಾ.31 ರವರೆಗೆ ಲಾಕ್ ಡೌನ್: ದ್ವಿತೀಯ ಪಿಯುಸಿ ಮುಂದುಡಿಕೆ

Share

ಬೆಂಗಳೂರು: ಕರೋನಾ ವೈರಸ್ ಕಾಣಿಸಿಕೊಂಡ ರಾಜ್ಯದ ಒಂಭತ್ತು ಜಿಲ್ಲೆಗಳನ್ನು ಮುಂಜಾಗ್ರತಾ ಕ್ರಮವಾಗಿ ಮಾ.31 ರವರೆಗೆ ಲಾಕ್ ಡೌನ್‌ ಗೊಳಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೋಮ್ಮಾಯಿ ಹೇಳಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಸಭೆ ನಡೆಸಿ ಕೆಲ ಪ್ರಮುಖ ನಿರ್ಣಯಗಳನ್ನು ಕೈಗೊಂಡಿದ್ದಾರೆ. ನಾಳೆಯೂ ರಾಜ್ಯದಲ್ಲಿ ಸಾರಿಗೆ ಸಂಪೂರ್ಣ ರದ್ದು ಗೊಳಿಸಲಾಗಿದ್ದು, ಮಾ.31 ರವರೆಗೂ ಎಸಿ ಬಸ್ ಸಂಚಾರ ರದ್ದು ಮಾಡಿದ್ದೇವೆ. ಇಂದು ರಾತ್ರಿ 9 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಗಳವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದರು.

ರಾಜ್ಯದ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕಲಬುರಗಿ, ಧಾರವಾಡ, ಬೆಳಗಾವಿ, ಮಂಗಳೂರು, ಮೈಸೂರು, ಕೊಡಗು ಹಾಗೂ ಚಿಕ್ಕಬಳ್ಳಾಪುರ ಸೇರಿದಂತೆ ಒಟ್ಟು ಒಂಭತ್ತು ಜಿಲ್ಲೆಗಳನ್ನು ಸಂಪೂರ್ಣ ಲಾಕ್ ಡೌನ್ ಒಳಪಡಲಿದ್ದು, ಲಾಕ್ ಡೌನ್ ಆದ ಜಿಲ್ಲೆಗಳಲ್ಲಿ ಅಗತ್ಯ ಸೇವೆ ಹೊರತು ಪಡಿಸಿ ಉಳಿದೆಲ್ಲಾ ಸೇವೆಗಳು ಲಭ್ಯವಿರುವುದಿಲ್ಲ. ಅಗತ್ಯ ವಸ್ತುಗಳು ಲಭ್ಯವಾಗಿರುವ ಕಾರಣ ಸಾರ್ವಜನಿಕರು ಗುಂಪು ಗುಂಪಾಗಿ ಮುಗಿ ಬಿಳುವ ಅಗತ್ಯವಿರುವುದಿಲ್ಲ ಎಂದು ಹೇಳಿದರು.

ನಾಳೆ ನಡೆಯಬೇಕಿದ್ದ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆಯನ್ನು ಮುಂದುಡಲಾಗಿದ್ದು, ಮಾರ್ಚ್ 31 ರ ನಂತರ ಮುಂದಿನ ದಿನಾಂಕ ಪ್ರಕಟಿಸಲಾಗುವುದು. ನಾಳೆ ಎಂದಿನಂತೆ ವಿಧಾನಮಂಡಲ ಕಲಾಪ ನಡೆಯಲಿದೆ‌. ಶೇ. 84% ರಷ್ಟು ಜನ ವರ್ಕ ಫ್ರಮ್ ಹೋಮ್ ಮಾಡುತ್ತಿದ್ದಾರೆ ಎಂದರು.