ನಕಲಿ ಬೀಜ ಮಾರಾಟ ಮಾಡುವುದು ರೈತರ ಬದುಕನ್ನು ಸಾಯಿಸಿದಂತೆ: ಕೃಷಿ ಸಚಿವ ಬಿ.ಸಿ.ಪಾಟೀಲ್

Share

ಹಾವೇರಿ: ಸತ್ತ ಬೀಜಗಳನ್ನು, ನಕಲಿ ಬೀಜಗಳನ್ನು ಮಾರಾಟ ಮಾಡುವುದು ರೈತರ ಬದುಕನ್ನು ಸಾಯಿಸುವಂತಹ ಮಹಾಪರಾಧವಾಗಿದೆ. ನಕಲಿ ಕಳಪೆ ಅಕ್ರಮ ಬೀಜವಾಗಲಿ, ಗೊಬ್ಬರವಾಗಲಿ ಮಾರಾಟ ಮಾಡುವವರು ಎಷ್ಟೇ ಪ್ರಭಾವಿಗಳಾದರೂ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ಜಿಲ್ಲಾ ಕೃಷಿ ಅಧಿಕಾರಿಗಳ ತಂಡ ಸುಮಾರು 6ಕೋಟಿ ರೂ.ಮೌಲ್ಯದ ಅಕ್ರಮ ಬಿಡಿ ಬೀಜಗಳ ದಾಸ್ತಾನು ವಶಪಡಿಸಿಕೊಂಡಿದ್ದು, ಪ್ರಕರಣವನ್ನು ನ್ಯಾಯಾಲಯದ ವಶಕ್ಕೆ ವಹಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಇಂತಹ ಕಳಪೆ ನಕಲಿ ಬೀಜ ಮಾರಾಟ ಮಾಡುವವರು ಬದುಕಿದ್ದಂತಹ ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಇಂತಹ ಕೃತ್ಯವನ್ನು ತಾವೆಂದಿಗೂ ಸಹಿಸುವುದಿಲ್ಲ. ಕೃಷಿ ಅಧಿಕಾರಿಗಳು ಮತ್ತು ವಿಚಕ್ಷಣಾ ತಂಡ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದ್ದಾರೆ. ಕೃಷಿ ಅಧಿಕಾರಿಗಳ ಕಾರ್ಯಕ್ಕೆ ಕೃಷಿ ಸಚಿವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.