ದೇಶಾದ್ಯಂತ ಮಾ.31 ರವರೆಗೆ ಸಂಪೂರ್ಣ ಪ್ಯಾಸೆಂಜರ್ ರೈಲ್ವೆ ಸಂಚಾರ ಸ್ಥಗಿತ

(ಸಾಂದರ್ಭಿಕ ಚಿತ್ರ)

(ಸಾಂದರ್ಭಿಕ ಚಿತ್ರ)

Share

ನವದೆಹಲಿ: ಮಹಾಮಾರಿ ಕೊರೋನಾ (ಕೋವಿಡ್ -19) ವೈರಸ್ ಸೊಂಕು ಭೀತಿ ಹಿನ್ನಲೆಯಲ್ಲಿ ಮಾ.31 ರವರೆಗೆ ದೇಶದ ಎಲ್ಲ ಪ್ಯಾಸೆಂಜರ್ ರೈಲುಗಳ ಸಂಚಾರವನ್ನು ಸಂಪೂರ್ಣ ರದ್ದುಗೊಳಿಸಲಾಗಿದೆ ಎಂದು ಭಾರತೀಯ ರೈಲ್ವೆ ಇಲಾಖೆ ಅದೇಶ ಹೊರಡಿಸಿದೆ.

ಕರೋನಾ ವೈರಸ್ ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಪ್ಯಾಸೆಂಜರ್ ರೈಲ್ವೆ ಸಂಚಾರ ಬಂದ್ ಮಾಡಲಾಗಿದ್ದು, ಕೇವಲ ಗೂಡ್ಸ್ ರೈಲುಗಳು ಎಂದಿನಂತೆ ಸಂಚರಿಸಲಿವೆ. ಏಪ್ರಿಲ್ 15 ರೊಳಗೆ ಈಗಾಗಲೇ ಟಿಕೆಟ್ ಬುಕ್ ಮಾಡಿದವರ ಹಣವನ್ನು ಮರುಳಿಸಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ.