ಜಿಲ್ಲೆಯ ಅತಿವೃಷ್ಟಿ ಅವಘಡಗಳ ನಿರ್ವಹಣೆಗೆ ಎನ್.ಡಿ.ಆರ್.ಎಫ್.ತಂಡ ಸನ್ನದ್ಧ

Share

ಹಾವೇರಿ: ಸತತವಾಗಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ಉಂಟಾಗುವ ಪರಿಸ್ಥಿತಿಯನ್ನು ನಿಭಾಯಿಸಲು ಪುಣೆಯಿಂದ ಎನ್.ಡಿ.ಆರ್.ಎಫ್. ತಂಡ ಜಿಲ್ಲೆಗೆ ಆಗಮಿಸಿದೆ.

ಬುಧವಾರ ಬೆಳಿಗ್ಗೆ ತಂಡವನ್ನು ಜಿಲ್ಲಾಡಳಿತ ಸ್ವಾಗತಿಸಿದೆ. ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ತಂಡದ ಮುಖ್ಯಸ್ಥ ಸಚ್ಚಿನ ನಾಲವಾಡ ಅವರು ಜಿಲ್ಲೆಯ ಪರಿಸ್ಥಿತಿ ಕುರಿತಂತೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಹಾಗೂ ಅಪರ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ ಅವರಿಂದ ಮಾಹಿತಿ ಪಡೆದರು. 21 ಜನರು ನೆರೆ ಹಾಗೂ ಅತಿವೃಷ್ಟಿ ಪರಿಸ್ಥಿತಿ ನಿಭಾಯಿಸುವ ನಿಟ್ಟಿನಲ್ಲಿ ಅಗತ್ಯ ಪರಿಕರಗಳೊಂದಿಗೆ ಸನ್ನದ್ಧವಾಗಿದ್ದು, ನಗರದ ಪ್ರವಾಸಿ ಮಂದಿರದಲ್ಲಿ ಎನ್.ಡಿ.ಆರ್.ಎಫ್.ತಂಡಕ್ಕೆ ವ್ಯವಸ್ಥೆ ಮಾಡಲಾಗಿದೆ.