ಜಾನಪದಕ್ಕೆ ಸಾವಿಲ್ಲ: ಗೃಹ ಸಚಿವ ಬಸವರಾಜ ಬೊಮ್ಮಾಯಿ

Share

ಹಾವೇರಿ: ಮನುಷ್ಯರ ಭಾವನೆಯ ಜೊತೆಗೆ ಬೆರೆತು ಹೋಗಿರುವ ಜಾನಪದಕ್ಕೆ ಸಾವಿಲ್ಲ, ನಾಗರೀಕತೆ ಆರಂಭದಲ್ಲಿ ಹುಟ್ಟಿದ ಇದು ಮನುಕುಲ ಅಂತ್ಯದವರೆಗೂ ಇರುತ್ತದೆ. ಜಾನಪದ ಎಂದು ನಶಿಸಲು ಸಾಧ್ಯವಿಲ್ಲವೆಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಗುರುವಾರ ಸಂಜೆ ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾವೇರಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಜಾನಪದ ಜಾತ್ರೆಯನ್ನು ನಗಾರಿ ಬಾರಿಸುವ ಮೂಲಕ
ಉದ್ಘಾಟಿಸಿ ಅವರು ಮಾತನಾಡಿದರು.

ಜಾನಪದ ಸಾಹಿತ್ಯವನ್ನು ಶಿಸ್ತಿಗೆಒಳಪಡಿಸಿದರೆ ಅದು ಜಾನಪದವಾಗಿರುವುದಿಲ್ಲ. ಜಾನಪದ ಮನೋಭಾವನೆ ಒಳಗೊಂಡಿರುವುದು. ಜಾನಪದ ಸಂಸ್ಕೃತಿ ಬೇರೆ ಬೇರೆ. ನಾಗರೀಕತೆ ಬೆಳವಣಿಗೆಯ ದಿಕ್ಸೂಚಿ. ನಾಗರೀಕತೆ ಬೆಳೆದರೆ ಸಂಸ್ಕೃತಿ ಬೆಳದ ಹಾಗೆ ಅಲ್ಲ. ಜಾನಪದ ಬಹಳ ದೊಡ್ಡ ಇತಿಹಾಸ ಇರುವ ಸಾಪ್ಟವೇರ್. ಹಾಡಿನ ಮೂಲಕ
ಸಂದೇಶಕಳಿಸುವುದು, ವೇಷಭೂಷಣಗಳ ಮೂಲಕ ಸಂದೇಶ ಕಳಿಸುವುದು ಜಾನಪದ ಇದು ಓರಿಜನಲ್
ಸಾಪ್ಟವೇರ್ ಇದರ ಬಳಕೆ ಗೊತ್ತಿದ್ದು, ಗೊತ್ತಿಲ್ಲದೇ ಬಳಕೆಯಾಗುತ್ತದೆ. ಬಹಳ
ದು:ಖವಾದದಾಗ, ಸಂತೋಷವಾದಾಗ ಜಾನಪದ ಬಳಸುತ್ತೇವೆ, ನಮ್ಮ ಬದುಕಿನಿಂದ ಜಾನಪದವನ್ನು
ವಿಂಗಡಿಸುವುದು ಸಾಧ್ಯವಿಲ್ಲ. ಜಾನಪದಕ್ಕೆ  ಶಿಸ್ತು, ಆಯಾಮ ಇರಬೇಕೆನ್ನುವ ಚಿಂತನೆಗಳು
ಸರಿಯಲ್ಲ. ಜಾನಪದ ಸಹಜವಾಗಿರುವಬೇಕು ಅದೇ ಜಾನಪದ ಎಂದು ಅವರು ತಿಳಿಸಿದರು.

ಅಧ್ಯಕ್ಷತೆಯನ್ನು ಶಾಸಕ ನೆಹರು ಓಲೇಕಾರ ವಹಿಸಿದ್ದರು. ಶಾಸಕರುಗಳಾದ ವೀರುಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ ಮಾತನಾಡಿದರು. ನಗರಾಭಿವೃದ್ಧಿ ಪ್ರಾಧಿಕಾರದ
ಅಧ್ಯಕ್ಷ ಶಿವಕುಮಾರ ಸಂಗೂರು, ಹೊಸಮಠ ಬಸವಶಾಂತಲಿಂಗ ಶ್ರೀ, ಗೌರಿಮಠದ ಶಿವಯೋಗಿ ಶಿವಾಚಾರ್ಯ ಶ್ರೀ, ಬಣ್ಣದ ರುದ್ರಚನ್ನಮಲ್ಲಿಕಾರ್ಜು ಶ್ರೀ, ವಿಶೇಷ ಆಹ್ವಾನಿತರಾಗಿ ಜಿಲ್ಲಾಧಿಕಾರಿ ಕೃಷ್ಣ
ಬಾಜಪೇಯಿ,  ಜಿ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಮೇಶ ದೇಸಾಯಿ, ಉಪವಿಭಾಗಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಕಸಾಪ ಅಧ್ಯಕ್ಷ ಲಿಂಗಯ್ಯ. ವೈ.ಬಿ.ಆಲದಕಟ್ಟಿ  ಮತ್ತಿತರರು
ಭಾಗವಹಿಸಿದ್ದರು. ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ ಚಲವಾದಿ
ಸ್ವಾಗತಿಸಿದರು.