ಕೊರೋನ ವೈರಸ್ ಸೋಂಕು ತಡೆಗೆ ಮಸೀದಿಗಳಲ್ಲಿ ಸಾಮೂಹಿಕ ನಮಾಝ್ ತಡೆಗೆ ಸುತ್ತೋಲೆ

Share

ಹಾವೇರಿ: ಕೊರೋನಾ ವೈರಸ್ ಸೋಂಕು ಹರಡುವಿಕೆ ತಡೆಗೆ ಮಾರ್ಚ್ 31ರವರೆಗೆ ರಾಜ್ಯದ ಎಲ್ಲ ಮಸೀದಿಗಲ್ಲಿ ಶುಕ್ರವಾರ ಪ್ರಾರ್ಥನೆ ಒಳಗೊಂಡಂತೆ ಸಾಮೂಹಿಕ ನಮಾಝ್ ಪ್ರಾರ್ಥನೆ ಕೈಗೊಳ್ಳದಂತೆ ಅಲ್ಪಸಂಖ್ಯಾತರ ಕಲ್ಯಾಣ ಹಜ್ ಮತ್ತು ವಕ್ಫ್ ಇಲಾಖೆ ಸರ್ಕಾರದ ಕಾರ್ಯದರ್ಶಿಗಳು ಸುತ್ತೋಲೆ ಹೊರಡಿಸಿದ್ದಾರೆ.

ಮಸೀದಿಗಳಲ್ಲಿ ಕಡಿಮೆ ಧ್ವನಿಯಲ್ಲಿ ಆಝಾನ್ ನಿರ್ವಹಿಸಬೇಕು ಹಾಗೂ ಪೇಶ್ ಇಮಾಮ್ ಮತ್ತು ಮೌಝನ್‍ರವರನ್ನು ಹೊರತುಪಡಿಸಿ ಯಾವುದೇ ಸಾರ್ವಜನಿಕರನ್ನು ಮಸೀದಿಯಲ್ಲಿ ಸಾಮೂಹಿಕ ನಮಾಝ್ ನಿರ್ವಹಣೆಗ ಅವಕಾಶ ನೀಡಿದಂತೆ ರಾಜ್ಯದ ಎಲ್ಲ ಮಸೀದಿಗಳ ಆಡಳಿತ ಸಮಿತಿಗೆ ಸೂಚನೆ ನೀಡಲಾಗಿದೆ.