ಕಟ್ಟಡ ಕಾರ್ಮಿಕರ ನೊಂದಣಿ, ನವೀಕರಣಕ್ಕೆ ಸೂಚನೆ

Share

ಹಾವೇರಿ: ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳಲ್ಲಿ ತೊಡಗಿರುವ ನೈಜ ಕಾರ್ಮಿಕರು ನೊಂದಣಿ ಮತ್ತು ನವೀಕರಣವನ್ನು ಸೇವಾ ಸಿಂಧು ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಲು ಸರ್ಕಾರ ಆದೇಶಿಸಿದೆ.

ಜಿಲ್ಲೆಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳಲ್ಲಿ ತೊಡಗಿರುವ ನೈಜ ಕಾರ್ಮಿಕರು ಕಾಮನ್ ಸರ್ವಿಸ್ ಸೆಂಟರ್‍ಗಳಲ್ಲಿ ನೊಂದಣಿ ಮತ್ತು ನವೀಕರಣ ಮಾಡಿಸಿಕೊಳ್ಳಲು ಬಯಸಿದಲ್ಲಿ ಗುರುತಿನ ಚೀಟಿ ನೊಂದಣಿಗೆ 25 ರೂ., ನವೀಕರಣಕ್ಕೆ ಪ್ರತಿ ವರ್ಷಕ್ಕೆ 25 ರೂ.ಗಳಂತೆ ಮೂರು ವರ್ಷದ ಅವಧಿಗೆ 75 ರೂ.ಗಳನ್ನು ಪಾವತಿಸಲು ಸರ್ಕಾರ ನಿಗಧಿಪಡಿಸಿದೆ. ನಿಗಧಿತ ಶುಲ್ಕವನ್ನು ಮಾತ್ರ ಪಾವತಿಸಿ ನೊಂದಣಿ ಹಾಗೂ ನವೀಕರಣ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಲಲಿತಾ ಸಾತೇನಹಳ್ಳಿ ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಡಳಿತ ಭವನದ ಬಿ ಬ್ಲಾಕ್ 3ನೇ ಮಹಡಿ, ಕೊಠಡಿ ಸಂಖ್ಯೆ 28ರಲ್ಲಿರುವ ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿಗಳ ಕಚೇರಿಯನ್ನು ಕೆಲಸದ ಸಮಯದಲ್ಲಿ ಸಂಪರ್ಕಿಸಲು ಕೋರಲಾಗಿದೆ.