ಕೋವಿಡ್19: ಹಾವೇರಿ ಜಿಲ್ಲೆಯಲ್ಲಿ ನಾಲ್ಕು ಹೊಸ ಪ್ರಕರಣಗಳು ಪತ್ತೆ, ಸೋಂಕಿತರ ಸಂಖ್ಯೆ 14 ಕ್ಕೆ ಏರಿಕೆ

Share

ಹಾವೇರಿ ಜಿಲ್ಲೆಯ ರಾಣೆಬೆನ್ನೂರ ಈಶ್ವರ ನಗರದಲ್ಲಿರುವ ದೇವರಾಜು ಅರಸು ವಸತಿ ನಿಲಯದ ಕ್ವಾರಟೈನ್ ನಲ್ಲಿದ್ದ ನಾಲ್ವರಿಗೆ ಶನಿವಾರ ಕೋವಿಡ್19 ಸೋಂಕು ಇರುವುದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ವಾಜಪೇಯಿ ತಿಳಿಸಿದ್ದಾರೆ.

ಈ ನಾಲ್ವರಲ್ಲಿ ಮೂವರು ಪುರುಷರು, ಓರ್ವ ಬಾಲಕಿ ಎಂದು ಮಾಹಿತಿ ಲಭ್ಯವಾಗಿದ್ದು, P-2856 ಗಂಡು 19 ವರ್ಷ, P-2857 ಬಾಲಕ 13 ವರ್ಷ, P-2858 ಬಾಲಕ 15 ವರ್ಷ, P-2859 11 ವರ್ಷದ ಬಾಲಕಿ ಸೇರಿ ನಾಲ್ವರಲ್ಲಿ ಸೋಂಕು ಇರುವುದು ಪತ್ತೆಯಾಗಿದೆ.

ಮಹಾರಾಷ್ಟ್ರದ ಠಾಣಾದಿಂದ ಆಗಮಿಸಿದ್ದ ಒಟ್ಟು 81 ಜನರನ್ನು ರಾಣೆಬೆನ್ನೂರ ಬಳಿಯ ಮುರಾರ್ಜಿ ವಸತಿ ಶಾಲೆ ಕ್ವಾರಂಟೈನ್ ನಲ್ಲಿರಿಸಿ ಎಲ್ಲರ ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗೆ ಕಳಿಸಲಾಗಿತ್ತು. ಇದರಲ್ಲಿ 59 ಜನರ ವರದಿ ಬಂದಿದ್ದು, ಇನ್ನು 22 ಜನರ ವರದಿ ಬರಬೇಕಿದೆ.

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 14ಕ್ಕೆ ಏರಿಕೆಯಾಗಿದ್ದು, ಈವರೆಗೆ ಒಟ್ಟು 3 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 11 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ.