ಲಾಕ್ ಡೌನ್ ಉಲ್ಲಂಘಿಸಿದರೆ ಬಿಳುತ್ತೆ ಬಾರಿ ದಂಡ: ಹಾವೇರಿ ಜಿಲ್ಲಾದ್ಯಂತ 2 ದಿನದಲ್ಲಿ 223 ಪ್ರಕರಣ ದಾಖಲು

Share

ಹಾವೇರಿ: ಜಿಲ್ಲಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದರೂ ಕ್ಯಾರೆ ಎನ್ನದೆ ಅನಾವಶ್ಯಕವಾಗಿ ಬೈಕ್ ಗಳಲ್ಲಿ ಓಡಾಡುತ್ತಿದ್ದ ಸವಾರರಿಂದ ಎರಡು ದಿನಗಳಲ್ಲಿ
223 ಪ್ರಕರಣಗಳನ್ನು ದಾಖಲಿಸಿ, ಬರೋಬರಿ ₹1,18,300 ದಂಡವನ್ನು ಸಂಚಾರಿ ಪೊಲೀಸರು ವಸೂಲಿ ಮಾಡಿದ್ದಾರೆ.

ಯುವಕರು, ವಿದ್ಯಾರ್ಥಿಗಳು ಸೇರಿದಂತೆ ಕೆಲವರು ಅನಗತ್ಯವಾಗಿ ನಗರದಲ್ಲಿ ಬೈಕ್‌ನಲ್ಲಿ ಸಂಚರಿಸುತ್ತಿದ್ದಾರೆ. ಇಂಥವರನ್ನು ಪೊಲೀಸರು ತಡೆದು ಲಾಠಿ ರುಚಿ ತೋರಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ದಂಡ ವಸೂಲಿ ಮಾಡುತ್ತಿದ್ದಾರೆ.

ಹಾವೇರಿ ತಾಲ್ಲೂಕಿನಲ್ಲಿ 125 ಮತ್ತು ರಾಣೆಬೆನ್ನೂರು ತಾಲ್ಲೂಕಿನಲ್ಲಿ 79 ಪ್ರಕರಣಗಳು ದಾಖಲಾಗಿದ್ದು, ಜಿಲ್ಲೆಯಲ್ಲೇ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿರುವ ತಾಲ್ಲೂಕುಗಳಾಗಿವೆ. ವಿಶೇಷವೆಂದರೆ, ರಟ್ಟೀಹಳ್ಳಿ ಮತ್ತು ಹಾನಗಲ್ಲ್ ತಾಲ್ಲೂಕಿನಲ್ಲಿ ಒಂದೇ ಒಂದು ಪ್ರಕರಣವೂ ದಾಖಲಾಗಿಲ್ಲ. ಉಳಿದಂತೆ, ಸವಣೂರು (9), ಬ್ಯಾಡಗಿ (6), ಹಿರೇಕೆರೂರು (2), ಶಿಗ್ಗಾವಿ (2) ಪ್ರಕರಣಗಳು ದಾಖಲಾಗಿವೆ.