ಎಐಟಿಯುಸಿಯಿಂದ ನಿರಾಶ್ರಿತರಿಗೆ ಪರಿಹಾರ ಸಾಮಗ್ರಿ ವಿತರಣೆ

Share

ಹಾವೇರಿ: ನೆರೆ ಪ್ರವಾಹಕ್ಕೆ ಒಳಗಾಗಿವೆ. ಅಲ್ಲಿನ ಜನರಿಗೆ ನೆರವಾಗಲು ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿರ ಒಂದು ದಿನದ ಗೌರವಧನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿಗಳಿ ಕೋರಲಾಗಿದೆ ಎಂದು ಎಐಟಿಯುಸಿ ರಾಜ್ಯಾಧ್ಯಕ್ಷ ಎಚ್.ಕೆ.ರಾಮಚಂದ್ರಪ್ಪ ತಿಳಿಸಿದರು.

ದಾವಣಗೇರಿ ಎಐಟಿಯುಸಿಯಿಂದ ಸಂಗ್ರಹಿಸಲಾಗಿದ್ದ ಅಕ್ಕಿ, ಬೆಳೆ, ಬಟ್ಟೆ, ಪಾತ್ರೆಗಳು,ಬಕೆಟ್, ಚಂಬು ಸೇರಿದಂತೆ ದಿನ ಬಳಕೆ ವಸ್ತುಗಳನ್ನು ಕೂಡಲ, ನಾಗನೂರ, ಹಲಸೂರು ಸೇರಿದಂತೆ ಮುಂತಾದ ಜಿಲ್ಲೆಯ ನಿರಾಶ್ರಿತರಿಗೆ ವಿತರಣೆ ಮಾಡಿ ಅವರು ಮಾತನಾಡಿದರು. 

ನಿರಂತರ ಮಳೆಯಿಂದ ಉತ್ತರ ಕರ್ನಾಟಕ ಹಲವು ಜಿಲ್ಲೆಗಳು ಮಹಾ ಮಳೆಗೆ ತುತ್ತಾಗಿ ಜನರ ಮನೆ ಹಾಗೂ ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡು ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಈ ಸಮಯದಲ್ಲಿ ಜನರಿಗೆ ಸರಕಾರ ಹಾಗೂ ರಾಜ್ಯದ ಜನತೆ ನೆರವಿನ ಹಸ್ತ ಕೈ ಚಾಚಿದ್ದು ಸಂತಸದ ವಿಚಾರ. ಅದರಂತೆ ಇಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಫೆಡರೇಷನ್ ರಾಜ್ಯ ಸಮಿತಿಯಿಂದ ಸಂಗ್ರಹಿಸಿದ ದಿನ ಬಳಕೆ ವಸ್ತುಗಳು ನೀಡಲಾಗುತ್ತಿದೆ ಎಂದರು.

ಸರಕಾರ ನೆರೆಯಿಂದ ಹಾನಿಯಾದ ಕುಟುಂಬಗಳಿಗೆ ಬೇಗ ಪುನರ್ವಸತಿ ಸೌಲಭ್ಯ ಕಲ್ಪಿಸಲಿ ಎಂಬ ಉದ್ಧೇಶದಿಂದ ಅಂಗನವಾಡಿ ಕಾರ್ಯಕರ್ತೆಯರ ಒಂದು ದಿನದ ಗೌರವಧನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತೆಗೆದುಕೊಳ್ಳುವಂತೆ ಈಗಾಗಲೇ ಸರಕಾರವನ್ನು ಕೋರಲಾಗಿದೆ ಎಂದು ತಿಳಿಸಿದರು.

ಬಿಸಿಯೂಟ ತಯಾರಕರ ಫೆಡರೇಷನ್ ರಾಜ್ಯಾಧ್ಯಕ್ಷ ಹೊನ್ನಪ್ಪ ಮರೆಮ್ಮನವರ ಮಾತನಾಡಿ, ಜಿಲ್ಲೆಯ ಹಲವು ಹಳ್ಳಿಗಳಲ್ಲಿ ಬಹುತೇಕ ಜನರು ಮನೆಗಳನ್ನು ಕಳೆದುಕೊಂಡಿದ್ದಾರೆ. ಅವರಿಗೆ ಮೊದಲ ಹಂತದಲ್ಲಿ 10. ಸಾವಿರ ರೂ ನೀಡಲಾಗುತ್ತಿದೆ. 10 ಸಾವಿರದಲ್ಲಿ ಅವರು ಏನ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಸರಕಾರ ಮೊದಲ ಹಂತದಲ್ಲಿ 50 ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಬಿಸಿಯೂಟ ತಯಾರಕರ ಫೆಡರೇಷನ್ ರಾಜ್ಯ ಕಾರ್ಯದರ್ಶಿ ಆವರಗೇರೆ ಚಂದ್ರು ಮಾತನಾಡಿ, ಜನರು ತಮ್ಮ ಲಕ್ಷಾಂತರ ಖರ್ಚು ಮಾಡಿ ಕಟ್ಟಿದ ಮನೆಗಳನ್ನು ಕಳೆದುಕೊಂಡಿದ್ದಾರೆ. ಬಹುತೇಕ ಮನೆಗಳು 15 ದಿನಗಳ ಕಾಲ ನೀರಿನಲ್ಲಿ ಮುಳುಗಿ ಹೋಗಿವೆ. ಯಾವಾಗ ಆ ಎಲ್ಲ ಮನೆಗಳು ಮತ್ತೆ ಬಿಳುತ್ತವೋ ತಿಳಿಯದಾಗಿದೆ. ಸರಕಾರ ಪೂರ್ಣ ಮನೆಗಳು ಬಿದ್ದರೆ 5. ಲಕ್ಷ ರೂ ಘೋಷಣೆ ಮಾಡಿದೆ. ಇಂದಿನ ದಿನಗಳಲ್ಲಿ 5. ಲಕ್ಷ ರೂಗಳಲ್ಲಿ ಮನೆ ಕಟ್ಟಲು ಸಾಧ್ಯವಿಲ್ಲ 10. ಲಕ್ಷ ರೂ ನೀಡಬೇಕು. ಅರ್ಧ ಹಾನಿಯಾದ ಮನೆಗಳಿಗೆ 5. ಲಕ್ಷ ರೂ ನೀಡಬೇಕು ಎಂದು ಒತ್ತಾಯಿಸಿದರು.

ಈ ಸಮಯದಲ್ಲಿ ಜಿ.ಡಿ.ಪೂಜಾರ, ರಾಮಣಚ್ಣಿ, ರಂಗನಾಥ, ಸುರೇಶ, ಗುರುನಾಥ ಲಕ್ಮಾಪೂರ, ಎಂ.ಬಿ. ಶಾರದಮ್ಮ, ವಿಶಾಲಾಕ್ಷಿ ಸರೋಜಾ, ಸುಧಾ ಸುನಂದಾ,ರೇಣುಕಾ, ಚೌಡಮ್ಮ, ಮಮತ, ಹೊನ್ನಮ್ಮ, ಮಲ್ಲಮ್ಮ, ಸುನಂದಾ ರೇವಣಕರ್, ಗೀತಾ ಶೆಟ್ಟರ, ಮಲ್ಲಮ್ಮ ವಡ್ಡರ, ಗಂಗಮ್ಮ ಕೊರಡೂರ ಸೇರಿದಂತೆ ಮುಂತಾದವರು ಹಾಜರಿದ್ದರು.