ವಿದ್ಯಾರ್ಥಿ ವೇತನಕ್ಕೆ ಅಂಚೆ ಇಲಾಖೆಯಿಂದ ಅರ್ಜಿ ಆಹ್ವಾನ

Share

ಹಾವೇರಿ: ಭಾರತೀಯ ಅಂಚೆ ಇಲಾಖೆ ಕೊಡಮಾಡುವ ದೀನ್‍ದಯಾಳ್ ಸ್ಪರ್ಶ ಯೋಜನೆ ವಿದ್ಯಾರ್ಥಿ ವೇತನಕ್ಕೆ 2019-20 ನೇ ಸಾಲಿಗೆ 6 ರಿಂದ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. 

ವಿದ್ಯಾರ್ಥಿಗಳು 2018-19ನೇ ಸಾಲಿನಲ್ಲಿ ಕನಿಷ್ಠ 60ರಷ್ಟು ಅಂಕಪಡೆದಿರಬೇಕು. ಎಸ್ಸಿ ಹಾಗೂ ಎಸ್ಟಿ ವಿದ್ಯಾರ್ಥಿಗಳಿಗೆ ಶೇ.55ರಷ್ಟು ಅಂಕಗಳು ಗಳಿಸಿರಬೇಕು. ಅಂಚೆ ಚೀಟಿ ಸಂಗ್ರಹ ಖಾತೆ ಹೊಂದಿರಬೇಕು. ಖಾತೆ ಇಲ್ಲದಿದ್ದರೆ ಹಾವೇರಿ ಅಥವಾ ರಾಣೇಬೆನ್ನೂರು ಅಂಚೆ ಕಚೇರಿಯಲ್ಲಿ ಖಾತೆ ತೆರೆಯಬೇಕು. ವಿದ್ಯಾರ್ಥಿ ವೇತನ ಪಡೆಯಲು ಎರಡು ಹಂತದಲ್ಲಿ ಪರೀಕ್ಷೆ ಇರುತ್ತದೆ. ಪಾಸಾದವರಿಗೆ ಮಾಸಿಕ 500 ರೂ ಗಳಂತೆ ವಾರ್ಷಿಕ ಆರು ಸಾವಿರ ರೂ ಗಳನ್ನು ಅಂಚೆ ಇಲಾಖೆ ವಿದ್ಯಾರ್ಥಿಗಳಿಗೆ ನೀಡುತ್ತದೆ. 

ಅರ್ಹ ವಿದ್ಯಾರ್ಥಿಗಳು ದಿನಾಂಕ 5-9-2019ರ ಒಳಗಾಗಿ ಸ್ಪೀಡ್ ಪೋಸ್ಟ್ ಮುಖಾಂತರ ಅಂಚೆ ಅಧೀಕ್ಷಕರು ಹಾವೇರಿ ಅಂಚೆ ವಿಭಾಗ ಹಾವೇರಿ-581110 ವಿಳಾಸಕ್ಕೆ ಕಳುಹಿಸಲು ಕೋರಿದೆ. ಹೆಚ್ಚಿನ ಮಾಹಿತಿಯನ್ನು ದೂರವಾಣಿ 08375-232513 ಅಥವಾ 9916628399 ( ರಾಜು ಕೋಪರ್ಡೆ) ಸಂಪರ್ಕಿಸಲು ಕೋರಿದೆ.