ಅ.24ರ ಶನಿವಾರ, ಅ.25 ಭಾನುವಾರ ಶಾಲೆಗಳ ರಜೆ ರದ್ದು, ಡಿಡಿಪಿಐ ಆದೇಶ

Share

ಹಾವೇರಿ: ಜಿಲ್ಲೆಯಲ್ಲಿನ ಅತೀವೃಷ್ಟಿಯ ಕಾರಣಕ್ಕೆ ಜಿಲ್ಲೆಯ ಎಲ್ಲ ಸರಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಿಗೆ ದಿರ್ಘಾವಧಿ ರಜೆ ನೀಡಲಾಗಿತ್ತು. ಸತತ ರಜೆಯಿಂದ ಶೈಕ್ಷಣಿಕ ಕೊರತೆ ಉಂಟಾಗಿದ್ದು ಸದರಿ ದಿನಗಳನ್ನು ಸರಿದೂಗಿಸುವ ಹಿನ್ನಲೆಯಲ್ಲಿ ಅ.24 ರ ಶನಿವಾರ ಹಾಗೂ ಅ.25 ರಂದು ಭಾನುವಾರ ಶಾಲೆಗಳ ರಜೆಯನ್ನು ರದ್ದುಪಡಿಸಲಾಗಿದೆ ಎಂದು ಡಿಡಿಪಿಐ ಅಂದಾನೆಪ್ಪ ಒಡೆಗೇರಿ ಶುಕ್ರವಾರ ಆದೇಶ ಹೊರಡಿಸಿದ್ದಾರೆ.

ಅ.24ರ ಶನಿವಾರವು ಸೇರಿ ಸತತ 4 ಶನಿವಾರ, 3 ಭಾನುವಾರ ಹಾಗೂ ಉರ್ದು ಶಾಲೆಗಳಿಗೆ 4 ಶುಕ್ರವಾರ, 3 ಭಾನುವಾರ ಶಾಲೆಗಳನ್ನು ಬೆಳಿಗ್ಗೆ 9:30 ರಿಂದ ಸಂಜೆ 4:30 ರವರೆಗೆ ಯಥಾವತ್ತಾಗಿ ಪೂರ್ಣ ದಿನ ಶಾಲೆಗಳನ್ನು ನಡೆಸುವುದು. ಈ ದಿನಗಳಂದು ಯಾವದೇ ರೀತಿಯ ವ್ಯತ್ಯಯಗಳಿಗೆ ಆಸ್ಪದ ನೀಡದೆ ಶೈಕ್ಷಣಿಕ ಕಾರ್ಯಚಟುವಟಿಕೆಗಳಲ್ಲಿ ತೊಡಗಕೊಂಡು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪಾಠ ಪ್ರಚನಗಳನ್ನು ನಡೆಸಲು ಅವರು ಸೂಚಿಸಿದ್ದಾರೆ.

ಯಾವುದೇ ರೀತಿಯ ವ್ಯತ್ಯಾಸಗಳು ಕಂಡು ಬಂದಲ್ಲಿ ಆಯಾ ತಾಲೂಕಿನ ಬಿಇಓ ಹಾಗೂ ಮುಖ್ಯ ಶಿಕ್ಷಕರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಮತ್ತು ನಿಯಮಾನುಸಾರ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಡಿಡಿಪಿಐ ಅವರು ತಿಳಿಸಿದ್ದಾರೆ.