ರಸಗೊಬ್ಬರ, ಬಿತ್ತನೆ ಬೀಜಕ್ಕೆ ಹೆಚ್ಚಿನ ದರ ವಸೂಲಿ ಮಾಡಿದರೆ ದೂರು ನೀಡಿ: ಕೃಷಿ ಇಲಾಖೆ ಜಂಟಿ ನಿರ್ದೇಶಕ

Share

ಹಾವೇರಿ: ರಸಗೊಬ್ಬರ, ಕ್ರೀಮಿನಾಶಕ ಹಾಗೂ ಬಿತ್ತನೆ ಬೀಜಗಳನ್ನು ನಿಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುವುದು ಕಂಡು ಬಂದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಹೆಚ್ಚಿನ ದರಕ್ಕೆ ಮಾರಾಟ ಮಾಡುವವರ ವಿರುದ್ಧ ಕೃಷಿ ಇಲಾಖೆ ಅಥವಾ ಸ್ಥಳೀಯ ರೈತ ಸಂಪರ್ಕ ಕೇಂದ್ರಗಳಿಗೆ ದೂರು ನೀಡಲು ರೈತರಿಗೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್ ಅವರು ಮನವಿ ಮಾಡಿಕೊಂಡಿದ್ದಾರೆ.

ಡಿಎಪಿ ರಸಗೊಬ್ಬರವನ್ನು ಪ್ರತಿ 50 ಕೆಜಿ ಚೀಲಕ್ಕೆ 1228.5ರಿಂದ 1258ರೂ ಎಂಓಪಿ ಗೊಬ್ಬರಕ್ಕೆ 670ರಿಂದ 673 ಯೂರಿಯಾ 295 (50 ಕೆಜಿ) ಹಾಗೂ 266 (45 ಕೆಜಿ) ರೂ ದರದಲ್ಲಿ ಮಾರಾಟ ಮಾಡಬೇಕಾಗಿದೆ. ಮಾರಾಟಗಾರರಿಂದ ಕಡ್ಡಾಯವಾಗಿ ಬಿಲ್ ಪಡೆಯಬೇಕು. ಗೊಬ್ಬರದ ಜೊತೆಗೆ ಇತರ ಯಾವುದೇ ರಸಗೊಬ್ಬರ ಅಥವಾ ಲಘು ಪೋಷಕಾಂಶಗಳನ್ನು ಖರೀದಿಸಲು ರೈತರಿಗೆ ಕಡ್ಡಾಯ ಮಾಡುವಂತಿಲ್ಲ. ಸಣ್ಣ ಕಾಳು ಯೂರಿಯಾ ಹಾಗೂ ದೊಡ್ಡ ಕಾಳು ಯೂರಿಯಾ ಗುಣಮಟ್ಟದಲ್ಲಿ ಯಾವುದೇ ವ್ಯತ್ಯಯವಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.