ರೈತರ ಕಣ್ಣಿರು ಒರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ: ಕೃಷಿ ಸಚಿವ ಬಿಸಿ ಪಾಟೀಲ್

Share

ಹಾವೇರಿ: ರಾಜ್ಯದ ಉದ್ದಗಲಕ್ಕೂ ಸಂಚರಿಸುವುದರೊಂದಿಗೆ ಒಬ್ಬ ರೈತನ ಮಗನಾಗಿ, ಕೃಷಿ ಸಚಿವನಾಗಿ ರೈತರ ಕಷ್ಟ ನಷ್ಟಗಳಿಗೆ ಸ್ಪಂದಿಸುವುದರೊಂದಿಗೆ ಅವರ ಕಣ್ಣಿರನ್ನು ಒರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಕೃಷಿ ಸಚಿವ ಬಿಸಿ ಪಾಟೀಲ್ ಹೇಳಿದರು.

ಕೃಷಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿ ಸ್ವ ಕ್ಷೇತ್ರ ಹಿರೇಕೆರೂರಿಗೆ ಆಗಮಿಸಿದ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಇಲಾಖೆಯಲ್ಲಿ ಹಲವಾರು ಸವಾಲುಗಳೊಂದಿಗೆ ಅನೇಕ ಬೇಡಿಕೆಗಳಿದ್ದು, ನಿನ್ನೆ ಮುಖ್ಯಮಂತ್ರಿ ಶ್ರೀ ಬಿಎಸ್ ಯಡಿಯೂರಪ್ಪ ರೈತ ಮುಂಖಡರ ಸಭೆ ಕರೆದು ಅವರ ಸಮಸ್ಯೆ ಆಲಿಸಿದ್ದಾರೆ. ಜೊತೆಗೆ ಬರುವ ಬಜೆಟ್ ನಲ್ಲಿ ರೈತರ ಪರವಾಗಿ ಯೋಜನೆ ರೂಪಿಸಲು ಚಿಂತನೆ ನಡೆಸಿದ್ದಾರೆ ಎಂದರು.

ಕೃಷಿ ಸಮ್ಮಾನ್ ಯೋಜನೆಯಲ್ಲಿ ಅನೇಕ ರೈತರ ಹೆಸರುಗಳು ಕೈಬಿಟ್ಟು ಹೊಗಿದ್ದನ್ನು ಮುಂದಿನ 10 ದಿನಗಳಲ್ಲಿ ಸರಿ ಪಡಿಸುವುದರೊಂದಿಗೆ 1.5 ಲಕ್ಷ ಜನ ರೈತರಿಗೆ ಯೋಜನೆ ತಲುಪುವಂತೆ ಅಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.