ಹಾವೇರಿಯಲ್ಲಿ ಮಹಿಳೆಯರ ಕತ್ತಿಗೆ ಕೈ ಹಾಕಿ ಸರಗಳ್ಳತನ: ಆತಂಕದಲ್ಲಿ ಜನರು

Share

ಹಾವೇರಿ: ನಗರದಲ್ಲಿ ಸರ ಕಳ್ಳತನ ಮತ್ತೆ ಸದ್ದು ಮಾಡಿದ್ದು, ಸೋಮುವಾರ ಸಂಜೆ ವಾಯುವಿಹಾರಕ್ಕೆ ಹೋಗಿ ಬರುವ ಸಂದರ್ಭದಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ಮಹಿಳೆಯರ ಕತ್ತಿಗೆ ಕೈ ಹಾಕಿ ಬಂಗಾರದ ಸರ ಕಳ್ಳತನ ನಡೆಸಿದ ಎರಡು ಪ್ರತ್ಯೇಕ ಪ್ರಕರಣಗಳು ನಗರದಲ್ಲಿ ಜರುಗಿವೆ.

ಇಲ್ಲಿಯ ಬಸವೇಶ್ವರ ನಗರದ 18ನೇ ಕ್ರಾಸ್ ಬಳಿ ಲಲಿತಾ ಹಿರೇಮಠ ಎಂಬವರ ಕತ್ತಿನಲ್ಲಿದ್ದ ಸುಮಾರು 40 ಗ್ರಾಂ ತೂಕದ ತಾಳಿಸರ, ವಿದ್ಯಾನಗರ ಸಿ ಬ್ಲಾಕ್‌ನ ಶಾಂತಾದೇವಿ ಪಟಗಾರ ಎಂಬವರ ಕುತ್ತಿಗೆಯಲ್ಲಿಂದ 35 ಗ್ರಾಂ ತೂಕದ ತಾಳಿಸರ ಹಾಗೂ ಚೈನ್ ಕದ್ದು ಕಳ್ಳರು ಪರಾರಿಯಾಗಿದ್ದಾರೆ. ಎರಡು ಪ್ರಕರಣಗಳಲ್ಲಿ ಒಂದೇ ತಂಡ ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಗಿದ್ದು, ಘಟನೆಯು 7.30ರಿಂದ ರಾತ್ರಿ 8 ಗಂಟೆಯೊಳಗೆ ನಡೆದಿದೆ‌. ಎರಡೂ ಪ್ರಕರಣಗಳಲ್ಲಿ ಕಪ್ಪು ಬಣ್ಣದ ಪಲ್ಸರ್ ಬೈಕ್‌ನಲ್ಲಿದ್ದವರೇ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದು, ಈ ಕುರಿತು ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.