ಶರಣರ ಸಂಸ್ಕೃತಿ ಉತ್ಸವದಲ್ಲಿ ಗಮನ ಸೆಳೆದ ವಿದೇಶಿ ನೋಟುಗಳು, ಅಂಚೆ ಚೀಟಿ ಹಾಗೂ ಛಾಯಾಚಿತ್ರಗಳು

Share

ಹಾವೇರಿ: ನಗರದ ಹೊಸಮಠದ ಬಸವ ಕೇಂದ್ರದಲ್ಲಿ ಜರುಗುತ್ತಿರುವ ಲಿಂ. ಜಗದ್ಗುರು ಶ್ರೀ. ನೈಘಂಟಿನ ಸಿದ್ದಬಸವ ಮುರುಘರಾಜೇಂದ್ರ ಶ್ರೀ ಹಾಗೂ ಶ್ರೀ ಮುರುಘೇಂದ್ರ ಮಹಾಶಿವಯೋಗಿಗಳವರ ಸ್ಮರಣೋತ್ಸವ ನಿಮಿತ್ಯ ಶರಣ ಸಂಸೃತಿ ಉತ್ಸವ-2019ರ ಪ್ರಯಕ್ತ ಬಸವ ಭವನದಲ್ಲಿ ಜನಮನ ಪೌಂಡೇಶನ್ ಹಾಗೂ ಕರ್ನಾಟಕ ಅಚೀವರ್ಸ ಬುಕ್ ಆಪ್ ರೆಕಾರ್ಡನ ಸಹಯೋಗದೊಂದಿಗೆ ಚಿತ್ರಕಲೆ ಹವ್ಯಾಸಿ ಛಾಯಾಚಿತ್ರಕಾರರು, ಕರಕುಶಲ ವಸ್ತುಗಳ ಕಲಾ ಪ್ರದರ್ಶನ, ಅಂಚೆಚೀಟಿ, ದೇಶಿಯ ಮತ್ತು ವಿದೇಶಿಯ ನೋಟು, ನಾಣ್ಯಗಳ ಸಂಗ್ರಹಕಾರರ ಕಲಾ ಪ್ರದರ್ಶನವನ್ನು ಹೊಸಮಠದ ಬಸವಶಾಂತಲಿಂಗ ಶ್ರೀಗಳು ಶನಿವಾರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಶ್ರೀಗಳು ಮಾತನಾಡಿ, ಹೊಸಮಠ ವಿವಿಧ ಕಲಾ ಪ್ರಕಾರದ ಕರಕುಶಲ ವಸ್ತುಗಳ ಕಲಾ ಪ್ರದರ್ಶನಕ್ಕೆ ಅವಕಾಶವನ್ನು ನೀಡುತ್ತಾ ಬಂದಿದೆ. ಈ ಭಾರಿಯ ಈ ಕಲಾ ಪ್ರದರ್ಶನ ಅತ್ಯಂತ ವೈಶಿಷ್ಟ್ಯತೆಯಿಂದ ಕೂಡಿದೆ ಎಂದರು.

ಸವಿದಿವ್ಯ ಕಾವ್ಯಕವಿ ಪ್ರಕಾಶ ನಾಗಪ್ಪ ಆರೀಕಟ್ಟಿ ಇವರು ನಾಣ್ಯ ಸಂಗ್ರಹಗಳನ್ನು ಪ್ರಾಚೀನ ಕಾಲದಿಂದ ಹಿಡಿದು ವಿವಿಧ ರಾಜರುಗಳ ಕಾಲದ ಹಾಗೂ ಸ್ವಾಂತ್ರತ್ಯದ ನಂತರದ ಭಾರತ ಸರ್ಕಾರ ಜಾರಿಗೊಳಿಸಿದ ವಿವಿಧ ನಾಣ್ಯಗಳನ್ನು ಸಂಗ್ರಹಣೆ ಮಾಡಿ ಇಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ. ಇದರಿಂದ ಪ್ರಾಚೀನ ಕಾಲದ ರಾಜ ಮಹಾರಾಜ ಕಾಲದ ಸಾಮಾಜಿಕ ಹಾಗೂ ಆರ್ಥಿಕ ಮತ್ತು ಧಾರ್ಮಿಕ ಸ್ಥಿತಿಗತಿಗಳು ಹೇಗೆ ಇದ್ದವು ಎಂಬುದರ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡುತ್ತದೆ ಎಂದರು.

ಜನಮನ ಪೌಂಡೇಶನ್ ಹಾಗೂ ಕರ್ನಾಟಕ ಅಚೀವರ್ಸ ಬುಕ್ ಆಪ್ ರೆಕಾರ್ಡನ ಸಂಸ್ಥಾಪಕೀಯರಾದ ಡಾ. ಅಂಬಿಕಾ ಹಂಚಾಟೆ ಮಾತನಾಡಿ, ನಮ್ಮ ಸುತ್ತಮುತ್ತ ಲಿರುವ ಪ್ರತಿಭೆಗಳಿಗೆ ಅವರ ಪ್ರತಿಭೆಗಳನ್ನು ಅನಾವರಣ ಗೊಳಸಲಿಕ್ಕಾಗಿ ಕಲಕುಶಲ ಸಾಮಗ್ರಿಗಳ ಕಲಾ ಪ್ರದರ್ಶನ ವನ್ನು ಆಯೋಜಿಸಲಾಗಿದೆ. ಪರಿಸರಕ್ಕೆ ಧಕ್ಕೆ ತರುವ ನಿರುಪಯೋಗಿ ವಸ್ತುಗಳನ್ನು ಬಳಸಿಕೊಂಡು ಗೃಹ ಬಳಕೆಗೆ ಹೇಗೆ ಅಲಂಕಾರಿಕ ವಸ್ತುಗಳಾಗಿ ಸಿದ್ಧಪಡಿಸಿಕೊಳ್ಳಲು ಸಾಧ್ಯವಿದೆ ಎಂಬುದನ್ನು ಇಲ್ಲಿ ಹಲವಾರು ಕಲಾವಿದರು ತೋರಿಸಿದ್ದಾರೆ ಎಂದರು.

ದಾವಣಗೆರೆಯ ರಾಕೇಶ ವರ್ಣೆಕರ ಇವರು ಓಂ ಮತ್ತು ಶಿವ ಪದಗಳನ್ನು ಬಳಸಿ ತುಮಕುರಿನ ಸಿದ್ದಗಂಗಾ ಶ್ರೀಗಳ ಭಾವಚಿತ್ರ, ಪಿಸ್ ಎಂಬ ಪದದಲ್ಲಿ ಬುದ್ಧನ ಚಿತ್ರವನ್ನು, ನಮೋ ಎಂಬ ಪದ ಬಳಸಿ ನರೇಂದ್ರ ಮೋದಿಯವರ ಭಾವಚಿತ್ರಗಳನ್ನು ಬಿಡಿಸಿರುವ ಇವರು ೩ ಭಾರಿ ಲಿಮ್ಕಾ ದಾಖಲೆಯನ್ನು ಮಾಡಿದ್ದು, ಗಿನ್ನಿಸ್ ದಾಖಲೆ ಮಾಡಲು ಮುಂದಾಗಿರುವ ಪ್ರತಿಭೆಗಳಿಗೂ ಇಲ್ಲಿ ಅವಕಾಶ ನೀಡಲಾಗಿದೆ ಎಂದರು.

ಹವ್ಯಾಸಿ ಸರಿದಾನ್ಯ ಚಿತ್ರ ಕಲಾವಿದ ಗಣೇಶ ರಾಯ್ಕರ ಇವರು ಭತ್ತದಲ್ಲಿ ಶಿವಲಿಂಗ ಶ್ರೀಗಳ ಭಾವಚಿತ್ರ, ಸ್ವಾಮಿ ವಿವೇಕಾನಂದರ ಭಾವಚಿತ್ರ, ರಾಗಿಯನ್ನು ಬಳಸಿ ಬಿಡಿಸಿದ ವಿಘ್ನ ವಿನಾಶಕ ಗಣೇಶನ ಭಾವಚಿತ್ರಗಳು, ಹಾಗೂ ವಿವಿಧ ನಿರುಪಯುಕ್ತವಾದ ವಸ್ತುಗಳನ್ನು, ಪೇಪರ್‌ಗಳನ್ನು ಬಳಸಿ ಸಿದ್ಧಪಡಿಸಲಾದ ಗೃಹೋಪಯೋಗಿ ವಸ್ತುಗಳು, ನಿರುಪಯುಕ್ತವಾದ ದಾರದ ರೀಲುಗಳನ್ನು ಬಳಸಿ ಸಿದ್ಧಪಡಿಸಲಾದ ಪೋಟೋ ಪ್ರೇಮ್, ಮರಳಿನಲ್ಲಿ ಬಿಡಸಲಾದ ಚಿತ್ರಗಳು  ನೋಡುಗರ ಮನಸ್ಸನ್ನು ಸೇಳೆಯುವಲ್ಲಿ ಯಶಸ್ವಿಯಾದರು.

ದೇಶ ವಿದೇಶಿಯ ನಾಣ್ಯಗಳು, ಬೇರೆ ಬೇರೆ ಮೌಲ್ಯದ ನೋಟುಗಳು ಹಾಗೂ ಅವುಗಳ ಗಾತ್ರ, ಭಾರತದೊಂದಿಗೆ ಆಯಾ ದೇಶಗಳ ಕರೇನ್ಸಿಯ ಮೌಲ್ಯವೆಷ್ಟು? ಪ್ರಮುಖ ಸೆಲಿಬ್ರಿಟಿಗಳ ಹುಟ್ಟಿದ ದಿನಾಂಕದೊಂದಿಗೆ ನೋಟುಗಳ ಸಿರಿಯಲ್ ಸಂಖ್ಯೆಗಳನ್ನು ಜೋಡಿಸಿರುವ ಹಾಗೂ ಚುಕ್ಕಿಚಿತ್ರ, ತೈಲ್ ಚಿತ್ರಗಳು ಆಕರ್ಷಕದಿಂದ ಕೂಡಿದ್ದವು.
ಈ ಸಂದರ್ಭದಲ್ಲಿ ಶರಣ ಸಂಸ್ಕೃತಿ ಉತ್ಸವ ಸಮಿತಿ ಅಧ್ಯಕ್ಷ, ಡಾ ಬಸವರಾಜ ವೀರಾಪೂರ, ಉಪಾಧ್ಯಕ್ಷ ಶ್ರೀಧರ ದೊಡ್ಡಮನಿ, ದಯಾನಂದ ಯಡ್ರಾಮಿ, ಡಾ. ಮೃಂತ್ಯುಂಜಯ ತುರಕಾಣಿ ರುದ್ರೇಶ ಚೆನ್ನಣ್ಣನವರ, ಎನ್.ಬಿ. ಕಾಳೆ, ಶಿವಬಸಪ್ಪ ಮುದ್ದಿ, ಮಲ್ಲಿಕಾರ್ಜುನ ಹಿಂಚಿಗೇರಿ, ಚಂದ್ರಶೇಖರ ಶಿಶುನಳ್ಳಿ, ಮುರುಗೆಪ್ಪ ಕಡೆಕೊಪ್ಪ ಸೇರಿದಂತೆ ಇತರರು ಹಾಜರಿದ್ದರು.