ವಿದ್ಯಾರ್ಥಿಗಳಿಗೆ ಸಂಶೋಧನಾ ಕ್ಷೇತ್ರದ ಕಡೆಗೆ ಆಸಕ್ತಿ ಮೂಡಿಸಿ: ಆರ್.ಎಸ್ ಪಾಟೀಲ್

Share

ಹಾವೇರಿ: ವಿಜ್ಞಾನದ ಎಲ್ಲಾ ಶಾಖೆಗಳಿಗೆ ತಾಯಿ ಬೇರು ಮೂಲ ವಿಜ್ಞಾನ. ಮೂಲ ವಿಜ್ಞಾನದಲ್ಲಿ ಸಂಶೋಧನೆಗೆ ವಿಫುುಲ ಅವಕಾಶಗಳಿವೆ, ಮೂಲ ವಿಜ್ಞಾನದಲ್ಲಿ ಸಮಗ್ರ ಅಧ್ಯಯನ, ಆವಿಷ್ಕಾರಗಳು, ನಡೆದಾಗ ಮಾತ್ರ ವಿಜ್ಞಾನದ ಎಲ್ಲ ವಿಭಾಗಗಳು ಸಮೃದ್ಧವಾಗಿ ಬೆಳೆಯಲು ಸಾಧ್ಯ. ಕಾರಣ ವಿದ್ಯಾರ್ಥಿಗಳಲ್ಲಿ ಮೂಲ ವಿಜ್ಞಾನದಲ್ಲಿ ಆಸಕ್ತಿ ಬೆಳೆಸಲು ಶಿಕ್ಷಕರು ಸಕ್ರೀಯ ಪಾತ್ರ ವಹಿಸಬೇಕಾಗಿದೆ ಎಂದು ವಿಜ್ಞಾನ ಲೇಖಕ, ಬಾಲವಿಜ್ಞಾನದ ಮಾಸಿಕದ ಉಪಸಂಪಾದಕ ಆರ್.ಎಸ್ ಪಾಟೀಲ್ ಅವರು ಹೇಳಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ.ರಾ.ವಿ.ಪ ಜಿಲ್ಲಾ ಘಟಕ ಇವರ ಸಹಯೋಗದಲ್ಲಿ ನಗರದ ಬಾಲಿಕಾ ಪ್ರೌಢಶಾಲೆಯಲ್ಲಿ ಗುರುವಾರ ನಡೆದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದ ಅಂಗವಾಗಿ ಹಾವೇರಿ ಜಿಲ್ಲಾ ಪ್ರೌಢಶಾಲೆ ಶಿಕ್ಷಕರಿಗಾಗಿ ಏರ್ಪಡಿಸಿದ್ದ ಮಾರ್ಗದರ್ಶಿ ಅಧ್ಯಾಪಕರ ಪೂರ್ವಭಾವಿ ಶಿಬಿರದಲ್ಲ್ಲಿ ಅವರು ಮಾತನಾಡಿದರು.

ಇತ್ತೀಚೆಗೆ ಪಿ.ಯು.ಶಿಕ್ಷಣದ ನಂತರ ವಿದ್ಯಾರ್ಥಿಗಳು .ಬಿ.ಇ, ಮೆಡಿಕಲ್,ಡೀಪ್ಲೋಮಾ ,ಅಗ್ರಿ ಗಳಂತಹ ಅನ್ವಿಕ ವಿಜ್ಞಾನದ ಕಡೆಗೆ ದುಂಬಾಲು ಬಿಳುತ್ತಿರುವಿದರಿಂದ ಮೂಲ ವಿಜ್ಞಾನ ಸಪ್ಪೆಯಾಗುತ್ತಿದೆ. ಭಾರತ ರತ್ನ ಸರ್.ವಿ.ರಾಮನ್ನರ ನಂತರ ಈವರೆಗೆ ಒಂದೇ ಒಂದು ವಿಜ್ಞಾನ ಕ್ಷೇತದ ನೋಬೆಲ್ ಬಹುಮಾನ ಭಾರತಕ್ಕೆ ಲಭಿಸಿಲ್ಲ. ಈ ನಿಟ್ಟಿನಲ್ಲಿ ಸಂಶೋಧನಾ ಕ್ಷೇತ್ರದ ಕಡೆ ಮಕ್ಕಳನ್ನು ಪ್ರೇರಿಪಿಸುವ ಅಗತ್ಯವಿದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿದ ದಾವಣಗೆರಿ ಹಿರಿಯ ವಿಜ್ಞಾನ ಸಂವಹನಕಾರರಾದ ಗುರುಸಿದ್ದಸ್ವಾಮಿ ಅವರು ಮಾತನಾಡಿ, ವಿಜ್ಞಾನದಲ್ಲಿ ಸಂಶೋಧನೆ ನಡೆಸಲು ಪ್ರಯೋಗಾಲಯ ಬೇಕೆಂದಿಲ್ಲ, ಸಂಶೋಧನಾ ಕ್ಷೇತ್ರಗಳಿಗೆ ಹೋಗ ಬೇಕೆಂದಿಲ್ಲ, ನಮ್ಮ ಸುತ್ತಮುತ್ತಲಿನ ಸಾಮಾನ್ಯ ಸಮಸ್ಯೆಗಳನ್ನು ಆಯ್ದುಕೊಂಡ ವೈಜ್ಞಾನಿಕ ತಳಹದಿಯ ಮೇಲೆ ಅಧ್ಯಯನ ಕೈಗೊಂಡು ಪರಿಹಾರ ಕಂಡುಕೋಳ್ಳುವುದೆ ಸಂಶೋಧನೆಯಾಗಿದೆ. ಚಂದ್ರನ ಮೇಲೆ ನೀವೇಶನ ಕಟ್ಟುವ ಕಾಲ ಸನ್ನಿಹಿತವಾಗಿರುವ ಈ ದಿನಮಾನಗಳಲ್ಲಿ ಮೌಢ್ಯ ಪೆಡುಂಭೂತವಾಗಿ ಕಾಡುತ್ತಿರುವುದು ವಿಪರ್ಯಾಸವಾಗಿದೆ. ಅಡುಗೆಮನೆ ಆರೋಗ್ಯ, ನೈರ್ಮಲ್ಯ, ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಪರಿಸರ ಇತ್ಯಾದಿ ಕ್ಷೇತ್ರಗಳಲ್ಲಿ ಚಿಕ್ಕ ಪುಟ್ಟ ಸಮಸ್ಯೆಗಳನ್ನು ಆಯ್ದುಕೊಂಡು ವಿದ್ಯಾರ್ಥಿಗಳನ್ನು ವಿಜ್ಞಾನಿಗಳನ್ನಾಗಿ ರೂಪಿಸುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಜ್ಞಾನ ಪರೀವಿಕ್ಷಕ ಬಿ.ಎಸ್.ಪಾಟೀಲ್. ನಿವೃತ್ತ ವಿಜ್ಞಾನ ಶಿಕ್ಷಕ ಪಿ .ಎಸ್ ಮಲಗಾರ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಜಿಲ್ಲಾ ಸಂಯೋಜಕ ಗುರುಬಸಯ್ಯ ಹತ್ತಿಮತ್ತೂರ ಸ್ವಾಗತಿಸಿದರು ಶೈಕ್ಷಣಿಕ ಸಂಯೋಜಕರು ವಿ.ಎಸ್ ಕಬ್ಬಿಣಿಕಂತಿಮಠ ಅವರು ಉಪಸ್ಥಿತರಿದ್ದರು.