ಮಹಿಳೆಯರು ದೌರ್ಜನ್ಯ, ಶೋಷಣೆಗಳನ್ನು ಮೆಟ್ಟಿ ನಿಲ್ಲಬೇಕು: ಬಸವಶಾಂತಲಿಂಗ ಶ್ರೀ

Share

ಹಾವೇರಿ: ಬುದ್ದಿವಂತರು, ಬಂಡವಾಳ ಶಾಹಿಗಳು ಹಾಗೂ ಕಾನೂನು ಬಾಹಿರ ಕೃತ್ಯದಲ್ಲಿ ತೊಡಗಿರುವವರಿಂದ ಇಂದು ಸಮಾಜದಲ್ಲಿ ಮಹಿಳೆಯರು ದೌರ್ಜನ್ಯ, ಶೋಷಣೆಗೆ ಒಳಗಾಗುತ್ತಿದ್ದು, ಮಹಿಳೆಯರು ಅವುಗಳನ್ನು ಸಮರ್ಥವಾಗಿ ಎದುರಿಸಬೇಕೆಂದು ಬಸವಕೇಂದ್ರ ಹೊಸಮಠದ ಬಸವಶಾಂತಲಿಂಗ ಶ್ರೀ ಹೇಳಿದರು.

ನಗರದ ದಾನೇಶ್ವರಿ ಕಲಾಮಂದಿರದಲ್ಲಿ ಶುಕ್ರವಾರದಂದು ಜರುಗಿದ ಶ್ರೀಮಠದ  ಶ್ರಾವಣ ಮಾಸದ ವಿಶೇಷ ಕಲ್ಯಾಣ ದರ್ಶಣ ಕಾರ್ಯಕ್ರಮದ ಸಾನಿದ್ಯವಹಿಸಿ ಅವರು ಮಾತನಾಡಿದರು. ಶೋಷಣೆ ಎಂಬುದು ಪ್ರಜ್ಞಾವಂತ ಸಮಾಜವನ್ನು ಅಣುಕಿಸುವಂತಿದ್ದು, ಆಧುನಿಕ ಸಮಾಜದ ಎಲ್ಲಿ ಕ್ಷೇತ್ರಗಳಲ್ಲಿ ಅದು ವ್ಯಾಪಿಸಿಕೊಂಡಿದೆ ಎಂದರು.

ಶೋಷಣೆಗೆ ಪರಿಹಾರವೆಂದರೆ ಅದು ಸ್ವಾಭಿಮಾನ ಮಾತ್ರ, 12 ನೇ ಶತಮಾನದಲ್ಲಿ ಶರಣರು ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಸಂದೇಹ ನಿವಾರಿಸಿ ಮುಕ್ತ ವಿಚಾರಗಳನ್ನು ಎತ್ತಿ ಹಿಡಿದಿದ್ದಾರೆ. ಈ ಮೂಲಕ ಪುರುಷರಷ್ಟೇ ಸ್ತೀಯರಿಗೂ ಸ್ವಾತಂತ್ರವಿದೆ ಎಂದು ಸಂದೇಶ ನೀಡಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಯಶ್ರೀ ನೀಲಗಿರಿಮಠ ಉಪನ್ಯಾಸ ನೀಡಿದರು. ಶೋಭಕ್ಕ ಮಾಗಾವಿ, ಎನ್.ಬಿ. ಕಾಳೆ ಸೇರಿದಂತೆ ಇತರರು ಇದ್ದರು.