ನೆಗಳೂರಿನಲ್ಲಿ ಮಕ್ಕಳ ನೃತ್ಯ ಕಲಿಕಾ ಕೇಂದ್ರ ಪ್ರಾರಂಭ

Share

ಗುತ್ತಲ: ಸಮೀಪದ ನೆಗಳೂರ ಗ್ರಾಮದಲ್ಲಿ ಬೆಂಗಳೂರಿನ ಡ್ಯಾನ್ಸ ಮಾಸ್ಟರ್ ಜಗದೀಶ ಡ್ಯಾನ್ಸ ಸ್ಟೋಡಿಯೊ ವತಿಯಿಂದ ಗ್ರಾಮೀಣ ಭಾಗದ ಮಕ್ಕಳಿಗೆ ನೃತ್ಯ ಕಲಿಕೆಯ ಉದ್ದೇಶದಿಂದ ಶನಿವಾರ ಗ್ರಾಮದಲ್ಲಿ ಗ್ರಾಮೀಣ ಪ್ರದೇಶದ ನೃತ್ಯ ಕಲಿಕಾ ಕೇಂದ್ರ ಪ್ರಾರಂಭಿಸಲಾಯಿತು.

ಕಲಿಕಾ ಕೇಂದ್ರವನ್ನು ಉದ್ಘಾಟಿಸಿದ ಮಾಸ್ಟರ ಜಗದೀಶ ಡ್ಯಾನ್ಸ ಸ್ಟೋಡಿಯೊದ ಸಂಸ್ಥಾಪಕ ಎ.ಜಿ.ಆರಾಧ್ಯ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳು ನಗರ ಪ್ರದೇಶದ ಮಕ್ಕಳಿಗೆ ಯಾವುದರಲ್ಲೂ ಕಮ್ಮಿಯಿಲ್ಲ. ನಗರ ಪ್ರದೇಶದ ಮಕ್ಕಳಿಗೆ ಸಿಗುವ ತರಬೇತಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸಿಕ್ಕರೆ ಅವರಗಿಂತಲೂ ಹೆಚ್ಚು ಷ್ರತಿಭಾವಂತರಾಗಿ ಹೊರಹೊಮ್ಮುವುದರಲ್ಲಿ ಸಂಶಯವಿಲ್ಲ ಎಂದು ತಿಳಿದು ನಮ್ಮ ಸಂಸ್ಥೆಯ ಶಾಖೆಯನ್ನು ನೆಗಳೂರ ಗ್ರಾಮದಲ್ಲಿ ಪ್ರಾರಂಭಿಸಿದ್ದೇವೆ. ಇದರ ಸದುಪಯೋಗವನ್ನು ಗ್ರಾಮಸ್ಥರು ತಮ್ಮ ಮಕ್ಕಳನ್ನು ಕಲಿಕಾ ಕೇಂದ್ರ ಸೇರಿಸುವುದರ ಮೂಲಕ ಪ್ರೋತ್ಸಾಹಿಸಬೇಕು ಎಂದರು.
ಜೀ ಕನ್ನಡ ವಾಹಿನಿ ಸೇರಿದಂತೆ ವಿವಿಧ ವಾಹಿನಿಗಳಲ್ಲಿ ನೃತ್ಯ ನಿರ್ದೇಶನ ಮಾಡಿರುವ ಪ್ರಕಾಶ ಮಾಸ್ಟರ್ ಸಾರಥ್ಯದಲ್ಲಿ ಪ್ರತಿ ಶನಿವಾರ ಮತ್ತು ರವಿವಾರ 4 ರಿಂದ 14 ವರ್ಷದೊಳಗಿನ ಮಕ್ಕಳಿಗೆ ನೃತ್ಯದ ವಿವಿಧ ಬಗೆಯ ಶೈಲಿಗಳನ್ನು ಕಲಿಸಲಾಗುತ್ತದೆ. ಜು.27 ರಿಂದ ತರಗತಿಗಳು ಪ್ರಾರಂಭವಾಗಲಿದ್ದು, ಆಸಕ್ತಿಯುಳ್ಳ ಮಕ್ಕಳು ತಮ್ಮಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಕಲಿಕಾ ಕೇಂದ್ರದ ಸಂಚಾಲಕ ಮಾಲತೇಶ ಮೈಲಾರ ಹೇಳಿದರು.

ಶಾಲಾ ಸಲಹಾ ಸಮಿತಿ ಅಧ್ಯಕ್ಷ ರಾಮಣ್ಣ ರಿತ್ತಿಮರಿಯಣ್ಣನವರ, ವರ್ತಕ ಜಗದೀಶ ಹುಲಗೂರ, ಫಕ್ಕೀರೇಶ ಕಂಬಳಿ, ವಂದೇ ಮಾತರಂ ಯುವ ಸಂಘಟನೆಯ ಸದಸ್ಯ ಅರುಣ ಕುಮಾರ ರಿತ್ತಿಮರಿಯಣ್ಣನವರ ಸೇರಿದಂತೆ ಇತರರು ಇದ್ದರು.