ಜೀವನದಲ್ಲಿ ಸುಖ ದುಃಖಗಳನ್ನು ಸಮನಾಗಿ ಸ್ವೀಕರಿಸಲು ಸಯಜ ಶಿವಯೋಗ ಮಾರ್ಗದರ್ಶನ ಮಾಡುತ್ತದೆ: ಡಾ. ಶಿವಮೂರ್ತಿ ಮುರಘಾ ಶರಣರು

Share

ಹಾವೇರಿ: ದುಃಖವಾದಾಗ, ಕಷ್ಟ ಬಂದಾಗ ಖಿನ್ನತೆಗೆ ಒಳಗಾಗುವ ಮನುಷ್ಯ ಅದೇ ಖುಷಿಯಾದಾಗ ಸಂತೋಷವಾಗಿರುತ್ತಾನೆ. ಸಹಜ ಶಿವಯೋಗ ಸುಖ ಮತ್ತು ದುಃಖಗಳೆರಡನ್ನು ಸಮನಾಗಿ ತೆಗೆದುಕೊಳ್ಳುವಂತೆ ಮಾಡುತ್ತದೆ ಎಂದು ಚಿತ್ರದುರ್ಗದ ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ನಗರದ ಬಸವ ಕೇಂದ್ರ ಶ್ರೀ ಹೊಸಮಠದಲ್ಲಿ ಲಿಂ. ಜಗದ್ಗುರು ಶ್ರೀ. ನೈಘಂಟಿನ ಸಿದ್ದಬಸವ ಮುರುಘರಾಜೇಂದ್ರ ಶ್ರೀಗಳ ಹಾಗೂ ಶ್ರೀ ಮುರುಘೇಂದ್ರ ಮಹಾಶಿವಯೋಗಿಗಳವರ ಸ್ಮರಣೋತ್ಸವ ನಿಮಿತ್ಯ ಶರಣ ಸಂಸೃತಿ ಉತ್ಸವ-2019 ರ ಭಾನುವಾರ ಬೆಳಗಿನ ಸಹಜ ಶಿವಯೋಗ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಶಿವಯೋಗ ಎನ್ನುವುದು ಪರಮಸುಖವಾಗಿದ್ದು, ಶಿವಯೋಗಕ್ಕೆ ದುಃಖವನ್ನು ಮರೆಸುವ ಶಕ್ತಿಯಿದೆ. ಸುಖ ಮತ್ತು ದುಃಖಗಳ ಸಮತೋಲನವನ್ನು ಕಾಪಾಡಿಕೊಳ್ಳಲು ಶಿವಯೋಗದಲ್ಲಿ ಭಾಗವಹಿಸಿದಾಗ ಸಿದ್ಧಿಯಾಗುತ್ತದೆ. ಜೀವನದಲ್ಲಿ ಬರುವ ಸಂತೋಷ, ಸಮಸ್ಯೆಗಳನ್ನು ಲಿಂಗಕ್ಕೆ ಅರ್ಪಿಸಿ ನಿರ್ಲಿಪ್ತರಾಗಿ ನಿಶ್ಚಿಂತರಾಗಬೇಕೆಂದು ತಿಳಿಸಿದರು.

ಸಹಜ ಶಿವಯೋಗದಿಂದ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದಗಿ. ಮನಸ್ಸು ನಿಯಂತ್ರಣದಲ್ಲಿದ್ದರೆ ಮಾಡುವ ಕಾರ್ಯಗಳು ಯಶಸ್ವಿಯಗುತ್ತವೆ. ಜೀವನದಲ್ಲಿ ಉತ್ತಮ ಸಾಧನೆ ಮಾಡುವುದಕ್ಕೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಗಳಲ್ಲಿ ಪಾಲಕರೊಂದಿಗೆ ಮಕ್ಕಳು ಪಾಲ್ಗೊಳ್ಳುವದಕ್ಕೆ ಮುಂದಾಗಬೇಕು ಎಂದರು.

ಶಿವಯೋಗದಲ್ಲಿ ಭಾಗವಹಿಸುವ ಮಕ್ಕಳಿಗೆ ಸುಖ ದುಃಖಗಳನ್ನು ಸರಿಸಮನಾಗಿ ತೆಗೆದುಕೊಳ್ಳುವ ದೈರ್ಯ ತುಂಬುವ ಕೆಲಸ ಮಾಡುತ್ತದೆ. ಹೀಗಾಗಿ ಮಕ್ಕಳಲ್ಲಿ ಶಿವಯೋಗದ ಅಭಿರುಚಿಯನ್ನು ಬೆಳೆಸುವ ಕೆಲಸ ಪಾಲಕರು ಮಾಡಬೇಕೆಂದು ಕರೆ ನೀಡಿದರು.

ಡಾ. ಬಸವಕುಮಾರ ಶ್ರೀಗಳು ಮಾತನಾಡಿ, ಮನುಷ್ಯನಲ್ಲಿನ ಅಭಿರುಚಿ, ಅಭಿವ್ಯಕ್ತಿಯಿಂದ ಅವರ ವ್ಯಕ್ತಿತ್ವ ವ್ಯಕ್ತವಾಗುತ್ತದೆ. ಗೊಂದಲ ಮುಕ್ತ ಜೀವನ ಸಾಗಿಸಬೇಕಾದರೆ ಏಕೋಭಾವನೆಯು ಇರಬೇಕು. ಇದು ಸಹಜ ಶಿವಯೋಗದಲ್ಲಿ ಸಿಗುತ್ತದೆ. ಜೀವನಕ್ಕೆ ಶಾರೀರಿಕ ಮಾನಸಿಕ ಸಮಸ್ಯೆಗಳ ಬಂದ ಸಂದರ್ಭದಲ್ಲಿ ಪ್ರತಿ ನಿತ್ಯ ಸುಪ್ರಭಾತ ಸಮಯದಲ್ಲಿ ಸಹಜ ಶಿವಯೋಗವನ್ನು ಮಾಡಿದರೆ ಅವುಗಳೆಲ್ಲವೂ ದೂರವಾಗುತ್ತವೆ ಎಂದು ಹೇಳಿದರು.

ಶಿವಯೋಗ ಕಾರ್ಯಕ್ರಮದಲ್ಲಿ ಹೊಸಮಠದ ಬಸವಶಾಂತಲಿಂಗ ಶ್ರೀಗಳು, ಎರೇಹೊಸಳ್ಳಿ ವೇಮನಾನಂದ ಶ್ರೀಗಳು, ಶಿಗರುಪ್ಪ ಗುರುಬಸವಮಠದ ಬಸವಭೂಷಣ ಶ್ರೀಗಳು, ಸಂಗಯ್ಯ ಇಟಗಿಮಠ, ಶರಣಬಸವ ನೀರಮಾನ್ವಿ, ಶರಣ ಸಂಸ್ಕೃತಿ ಉತ್ಸವ ಸಮಿತಿ ಅಧ್ಯಕ್ಷ, ಡಾ ಬಸವರಾಜ ವೀರಾಪೂರ, ಉಪಾಧ್ಯಕ್ಷ ಶ್ರೀಧರ ದೊಡ್ಡಮನಿ, ಕಾರ್ಯಾಧ್ಯಕ್ಷ ಶಿವಕುಮಾರ ಸಂಗೂರ, ರಾಜೇಂದ್ರ ಸಜ್ಜನರ, ನಾಗೇಂದ್ರ ಕಟಕೋಳ, ಶೋಭಾ ಮಾಗಾವಿ, ದಯಾನಂದ ಯಡ್ರಾಮಿ, ಡಾ. ಮೃಂತ್ಯುಂಜಯ ತುರಕಾಣಿ, ರುದ್ರೇಶ ಚೆನ್ನಣ್ಣನವರ, ಎನ್.ಬಿ. ಕಾಳೆ, ಶಿವಬಸಪ್ಪ ಮುದ್ದಿ, ಮಲ್ಲಿಕಾರ್ಜುನ ಹಿಂಚಿಗೇರಿ, ಚಂದ್ರಶೇಖರ ಶಿಶುನಳ್ಳಿ, ಮುರುಗೆಪ್ಪ ಕಡೆಕೊಪ್ಪ ಸೇರಿದಂತೆ ಇತರರು ಇದ್ದರು.