ಕೊರೋನಾ ವಾರಿಯರ್ಸ್‌ಗೆ ಸನ್ಮಾನ

Share

ಹಾವೇರಿ: ಸಾರ್ವಜನಿಕರು ಆರೋಗ್ಯ ಇಲಾಖೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿನೆ‌ ಮಾಡುವ ಮೂಲಕ ಎಲ್ಲರೂ ಒಗ್ಗೂಡಿ ಕೊರೊನಾ ವೈರಸ್ ನಿರ್ಮೂಲನೆಗೆ ಕೈಜೋಡಿಸಬೇಕೆಂದು ಕಳಸೂರ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕಿ ಶ್ವೇತಾ ಟಿ.ವಿ ಹೇಳಿದರು.

ಜಿಲ್ಲೆಯ ಸವಣೂರ ತಾಲೂಕಿನ ಹಿರೇಮುಗದೂರ ಗ್ರಾಮದ ಸ್ವಾರಿದುರಗಮ್ಮದೇವಿ ದೇವಸ್ಥಾನದಲ್ಲಿ ಅಮ್ಮಾ ಸಂಸ್ಥೆ ಹಾಗೂ ಗ್ರಾಮದ ವತಿಯಿಂದ ಆಯೋಜಿಸಿದ್ದ ಅಂಗನವಾಡಿ ಕಾರ್ಯಕರ್ತರು, ಆರೋಗ್ಯ ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತರಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರತಿಯೊಬ್ಬರೂ ಸಾಮಾಜಿಕ ಅಂತರ, ದೇಹದ ಭಾಗಗಳನ್ನು ಸ್ವಚ್ಚವಾಗಿಟ್ಟುಕೊಳ್ಳುಬೇಕು. ಅವಶ್ಯಕತೆ ಇದ್ದು, ಹೊರಗೆ ಹೋದಾಗ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಬೇಕು. ಗ್ರಾಮಕ್ಕೆ ಬೇರೆ ಊರಿನಿಂದ ಯಾರಾದರು ಬಂದರೆ ಆರೋಗ್ಯ ಇಲಾಖೆಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು. ಅನಾರೋಗ್ಯ ಉಂಟಾದರೆ ಇಲಾಖೆ ಗಮನಕ್ಕೆ ತನ್ನಿ. ನಿಮ್ಮ ಸೇವೆ ಮಾಡಲು ನಾವು ಸದಾ ಸಿದ್ದರಿದ್ದೇವೆ ಎಂದರು.

ಪರಮಯ್ಯಸ್ವಾಮಿ ಹಿರೇಮಠ ಮಾತನಾಡಿ, ಕೊರೋನಾ ವೈರಸ್ ಎದುರಿಸಲು ವಾರಿಯರ್ಸ್‌ ಗೆ ಎಲ್ಲರೂ ಉತ್ತಮ ರೀತಿಯ ಸಹಕಾರ ನೀಡಬೇಕು. ಅವರ ಸೇವೆ ಪ್ರೋತ್ಸಾಹಿಸಲು ಸನ್ಮಾನ ಮಾಡುತ್ತಿರುವ ಅಮ್ಮಾ ಸಂಸ್ಥೆ ಉತ್ತಮ ಕೆಲಸಗಾರರನ್ನು ಗುರುತಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ಪಿಡಿಓ ಯೋಗೇಶ ಚಾಕರಿ, ಅಂಗನವಾಡಿ ಕಾರ್ಯಕರ್ತೆ ನೀಲಮ್ಮ ಹರಿಮುರಿ ಮಾತನಾಡಿದರು.

ಹಿರಿಯ.ಆ.ಸ ಶ್ವೇತಾ ಟಿ.ವಿ, ಆಶಾ ಕಾರ್ಯಕರ್ತೆ ರೇಣುಕಾ ಪವಾರ, ಮುತ್ತಕ್ಕ ಅರಳ್ಳಿಹಳ್ಳಿ, ಲಕ್ಷ್ಮೀ ಮ ನಡುವಿನಮನಿ, ವನಿತಾ ಪಾಟೀಲ ಹಾಗೂ ನೀಲಮ್ಮ ಹರಿಮುರಿ ಅವರನ್ನು ಸನ್ಮಾನಿಸಲಾಯಿತು.

ಮರಿಯಪ್ಪ ನಡುವಿನಮನಿ, ಕೊಟೆಪ್ಪ ಆರೇರ, ಫಕ್ಕಿರೇಶ ಕಾಳಿ, ಅಮ್ಮಾ ಸಂಸ್ಥೆಯ ರುಕ್ಮುಣಿ ಆರೇರ, ಕವಿತಾ ಮರಾಠೆ, ನಿಂಗಪ್ಪ ಆರೇರ, ಮಂಜುನಾಥ ಕೋಳೂರ, ದೀಪಾ ಆರೇರ ಸೇರಿದಂತೆ ಇತರರು ಇದ್ದರು.