ಇಷ್ಟಲಿಂಗ ಪೂಜೆಯಿಂದ ಸರ್ವ ಪಾಪನಾಶ: ಕೇದಾರ ಶ್ರೀ

Share

ಹಾವೇರಿ: ಮನುಷ್ಯನು ಇಷ್ಟಲಿಂಗ ಪೂಜೆ ಮಾಡುವುದರಿಂದ ತಾನು ಮಾಡಿರುವ ಸರ್ವ ಪಾಪಗಳಿಂದ ಮುಕ್ತ ಹೊಂದುತ್ತಾನೆಂದು ಕೇದಾರ ಪೀಠದ ಜಗದ್ಗುರು ಭೀಮಾಶಂಕರ ಶಿವಾಚಾರ್ಯರು ಹೇಳಿದರು.

ತಾಲೂಕಿನ ನೆಗಳೂರ ಗ್ರಾಮದ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಆವರಣದಲ್ಲಿ ಬುಧವಾರ ಸಂಗೀತಯುಕ್ತ ಇಷ್ಟಲಿಂಗ ಪೂಜೆ ನೇರವೇರಿಸಿ ಅವರು ಆರ್ಶೀವಚನ ನೀಡಿದರು.

ಪ್ರತಿಯೊಬ್ಬ ಮನುಷ್ಯನು ಕೂಡ ಮೂರು ರತ್ನ ಗಳನ್ನು ಹೊಂದಿರಬೇಕು. ಭಸ್ಮ, ಇಷ್ಟಲಿಂಗ, ರುದ್ರಾಕ್ಷಿಗಳೆಂಬ ತ್ರಿರತ್ನಗಳನ್ನು ಸದಾ ಧರಿಸರಲೇಬೇಕು ಎಂದರು.

ನೆಗಳೂರ ಗುರುಶಾಂತೇಶ್ವರ ಶಿವಾಚಾರ್ಯ ಶ್ರೀ ಮಾತನಾಡಿ, ಪೂಜಾನುಷ್ಠಾನುಗಳಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ವೀರಶೈವ ಸಿದ್ದಾಂತ ಹೇಳುವುದ್ದಷ್ಟೆಯಲ್ಲ ಆಚರಣೆಮಾಡುವುದಕ್ಕೆ ಭಗವಂತನದಿಂದ ಪಡೆದ ಜನ್ಮ ಕ್ಕೆ ಪೂಜೆಯಿಂದ ಆತನಿಗೆ ಬಾಡಿಗೆ ಕಟ್ಟಬೇಕು ಎಂದರು.

ಮದ್ದದರಕಿ ಗಚ್ಚಿನ ಮಠದ ಶಿವಯೋಗಿ ಶಿವಾಚಾರ್ಯ ಶ್ರೀ ಮಾತನಾಡಿದರು. ಚಂದ್ರಶೇಖರ ತೋಟಗೇರ, ಸಿ.ಬಿ ಕುರುವತ್ತಿಗೌಡ್ರ, ಗದಿಗೆಯ್ಯಸ್ವಾಮಿ ಹಿರೇಮಠ, ಗುರುರಾಜ್ ಕಲಕೋಟಿ, ಬನ್ನಿಕೊಪ್ಪದ ಸುಜ್ಞಾನದೇವ ಶಿವಾಚಾರ್ಯ ಶ್ರೀ, ಕಣ್ವಕಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಶ್ರೀ, ಕೊಡಲ ಗುರುಮಹೇಶ್ವರ ಶಿವಾಚಾರ್ಯ ಶ್ರೀ, ಹೆರೂರಿನ ಗುಬ್ಬಿ ನಂಜುಡ ಪಂಡಿತರಾಧ್ಯ ಶ್ರೀ, ಹಾವೇರಿ ಗುರುಪಾದೇವರಮಠದ ಶಿವಯೋಗಿ ಶಿವಾಚಾರ್ಯ ಶ್ರೀ, ಕುರುವತ್ತಿಯ ಸಿದ್ದನಂದಿಶ್ವರ ಶ್ರೀ ಸೇರಿದಂತೆ ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ ಸದ್ಭಕ್ತರು ಜಗದ್ಗುರುಗಳ ಇಷ್ಟಲಿಂಗ ಪೂಜೆಯಲ್ಲಿ ಪಾಲ್ಗೊಂಡು ಧನ್ಯರಾದರು.
ಶಿವಯೋಗಿ ಕಂಬಾಳಿಮಠ, ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.