ರೈಲ್ವೆ ಇಂಜಿನ್ ನಲ್ಲಿ ಇಂದನ ಸೋರಿಕೆ: ಡಿಸೇಲ್ ತುಂಬುಕೊಳ್ಳಲು ಮುಗಿ ಬಿದ್ದ ಸಾರ್ವಜನಿಕರು

Share

ಹಾವೇರಿ: ಹುಬ್ಬಳ್ಳಿಯಿಂದ ಹೊರಡುವ ಬೆಂಗಳೂರು ಪ್ಯಾಸೆಂಜರ್ ರೈಲ್ವೆ ಇಂಜಿನಿನಲ್ಲಿ ಇಂಧನ ಸೋರಿಕೆಯಾದ ಪರಿಣಾಮ ಡಿಸೇಲ್ ತುಂಬಿಕೊಳ್ಳಲು ಸಾರ್ವಜನಿಕರು‌ ಮುಗಿಬಿದ್ದ ಘಟನೆ ಮಂಗಳವಾರ ಜಿಲ್ಲೆಯ ಸವಣೂರು ತಾಲೂಕಿನ ಯಲವಿಗಿ ರೈಲು ನಿಲ್ದಾಣದಲ್ಲಿ ಘಟನೆ ಜರುಗಿದೆ.

ಹುಬ್ಬಳ್ಳಿಯಿಂದ ಬೆಂಗಳೂರುಗೆ ಹೋರಟಿದ್ದ ಪ್ಯಾಸೆಂಜರ್ ರೈಲು.56516 ಸಂಖ್ಯೆ ಗಾಡಿಯ ಇಂಜಿನ್ ನಲ್ಲಿ ಸೋರಿಕೆಯಾಗಿ ಟ್ಯಾಂಕ್ ನಲ್ಲಿದ್ದ ಡಿಸೇಲ್ ಸೋರಿಕೆಯಾಗುತ್ತಿತ್ತು.‌ ಇದನ್ನು ಕಂಡ ಸ್ಥಳೀಯರು ಬಕೆಟ್, ಕೊಡಪಾನ, ಬುಟ್ಟೆ ಸೇರಿದಂತೆ ಮತ್ತಿತರ ವಸ್ತುಗಳಲ್ಲಿ ಡಿಸೇಲ್ ತುಂಬಿಕೊಳ್ಳಲು ಸಾರ್ವಜನಿಕರು ನಾ.. ಮುಂದು, ತಾ..ಮುಂದು ಎಂದು ಮುಗಿ ಬಿದ್ದರು. ತೈಲ ಸೋರಿಕೆಯಿಂದಾಗಿ ರೈಲ್ವೆ ಸಂಚಾರ ಸ್ಥಗಿತಗೊಂಡ ಪರಿಣಾಮ ಪ್ರಯಾಣಿಕರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಅದೇ ಮಾರ್ಗದಲ್ಲಿ ಸಂಚರಿಸುವ ವಿಶ್ವಮಾನವ ಎಕ್ಸ್‌ಪ್ರೆಸ್‌ ರೈಲು ಗಾಡಿಯಲ್ಲಿ ಕೆಲ ಪ್ರಯಾಣಿಕರು ಪ್ರಯಾಣ ಮುಂದುವರೆಸಿದರು.