ಪೂರಕ ಪ್ಯಾಕೇಜ್ ಸೌಲಭ್ಯ ಕಲ್ಪಿಸಲು ಮನವಿ

Share

ಸವಣೂರ: ಲಾಕ್ ಡೌನ್ ವಿಸ್ತರಣೆ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಹಡಪದ (ಕ್ಷೌರಿಕ) ಸಮಾಜದವರ ಹಿತರಕ್ಷಣೆಗಾಗಿ ಪೂರಕ ಪ್ಯಾಕೇಜ್ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ತಾಲೂಕಾ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಸದಸ್ಯರು ಸೋಮವಾರ ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ ಮುಖೇನ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ತಾಲೂಕಿನಲ್ಲಿ ಹಡಪದ ಸಮಾಜ ಕ್ಷೌರಿಕ ವೃತ್ತಿಯನ್ನು ಅವಲಂಬಿಸಿ ಜೀವನ ನಡೆಸುತ್ತಿರುವುದರಿಂದ ಲಾಕ್ ಡೌನ್ ಹಿನ್ನೆಲೆಯಲ್ಲಿ ಕೆಲಸವಿಲ್ಲದೇ ತಾಲೂಕಿನಲ್ಲಿ ನೂರಾರು ಕುಟುಂಬಗಳು ಆರ್ಥಿಕ ಸಂಕಷ್ಟಗಳನ್ನು ಎದುರಿಸುವಂತಾಗಿದೆ. ಆದ್ದರಿಂದ ಸಮಾಜದ ಜನರ ಉಪಜೀವನಕ್ಕೆ ಬೇಕಾದ ಅನುಕೂಲತೆಗಳನ್ನು ಕಲ್ಪಿಸಿಕೊಡಬೇಕೆಂದು ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ನೀಲಪ್ಪ ಹಡಪದ, ಶಹರ ಘಟಕದ ಅಧ್ಯಕ್ಷ ವೀರಭದ್ರಪ್ಪ ಹಡಪದ, ಪದಾಧಿಕಾರಿಗಳಾದ ಸುರೇಶ ಹಡಪದ, ಸೋಮಶೇಖರ ಹಡಪದ, ಯಲ್ಲಪ್ಪ ಹಡಪದ, ರಮೇಶ ಹಡಪದ, ಶಿವಾನಂದ ಕ್ಷೌರದ ಸೇರಿದಂತೆ ಇತರರು ಇದ್ದರು.