ರಾಣೇಬೆನ್ನೂರ ನಗರದಲ್ಲಿ ಸೆ. 22ರ ಮದ್ಯ ಮಾರಾಟ ನಿಷೇದ ರದ್ದು

Share

ಹಾವೇರಿ: ರಾಣೇಬೆನ್ನೂರ ನಗರದಲ್ಲಿ ಸೆಪ್ಟೆಂಬರ್ 16 ಹಾಗೂ 22 ರಂದು ಗಣೇಶ ವಿಸರ್ಜನೆ ಕಾರ್ಯಕ್ರಮ ಮುಂದೂಡಿರುವುದರಿಂದ ಈ ಎರಡು ದಿನ ಮದ್ಯ ಮಾರಾಟಕ್ಕೆ ಹೇರಲಾಗಿದ್ದ ನಿಷೇಧವನ್ನು ರದ್ದು ಪಡಿಸಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.