ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಗೆ ಮತ್ತೊಂದು ಗ್ರಹಣ

Share

ಧಾರವಾಡ, ಜುಲೈ 2: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಗೆ ಮತ್ತೊಂದು ಗ್ರಹಣ ಎದುರಾಗಿದೆ.  ಅವಳಿ ನಗರಗಳಲ್ಲಿ ಹೊಸದಾಗಿ ರಚನೆಯಾದ 82 ವಾರ್ಡ್ ಗಳಿಗಲ್ಲಿ ಪರಿಶಿಷ್ಟ ಜಾತಿಯ ಸಮುದಾಯಕ್ಕೆ ಸರಿಯಾದ ಮೀಸಲಾ ಯಿತಿಯನ್ನು ಸರಿಯಾಗಿ ನೀಡಿಲ್ಲವೆಂದು ನ್ಯಾಯವಾದಿ ಬಸವ ರಾಜ ತೆರದಾಳ ಧಾರವಾಡ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ದೂರನ್ನು ಸಲ್ಲಿಸಿದ್ದರು.

ಈ  ದೂರಿನ ಬೆನ್ನಲ್ಲೆ  ಧಾರವಾಡ ಹೈಕೊರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಮೀಸಲಾತಿ ವಿಚಾರದಲ್ಲಿ ರಾಜ್ಯ ಚುನಾವಣೆಯ ಆಯೋಗಕ್ಕೆ ನೊಟೀಸ್ ಜಾರಿ ಮಾಡಿದ್ದಾರೆ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.