ಅವ್ಯವಸ್ಥೆಯ ಆಗರವಾದ ಕಿಮ್ಸ್​​ನ ಕೋವಿಡ್​ ಐಸಿಯು ವಾರ್ಡ್

Share

ಹುಬ್ಬಳ್ಳಿ, ಮೇ 30: ಕರೊನಾ‌ ವಿರುದ್ಧದ ಹೋರಾಟದಲ್ಲಿ ಮೊದಲ ಸ್ಥಾನದಲ್ಲಿರುವ ಕಿಮ್ಸ್​​ನ ಆಸ್ಪತ್ರೆಯಲ್ಲಿ ಕರೊನಾ ಐಸಿಯು ವಾರ್ಡ್​​ ಈಗ ಅವ್ಯವಸ್ಥೆಯ ಆಗರವಾಗಿದೆ.

ಕರೊನಾ ಐಸಿಯು ವಾರ್ಡ್ನಲ್ಲಿ ವೈದ್ಯರು, ನರ್ಸ್​ಗಳು ಕೂಡ ಪಿಪಿಇ ಕಿಟ್ ಹಾಕಿಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ. ಆದ್ರೆ ಕಿಮ್ಸ್​​ನ ಕೊರೊನಾ ಐಸಿಯು ವಾರ್ಡ್ನಲ್ಲಿ  ಯಾವುದೋ ಮದುವೆ ಛತ್ರದಲ್ಲಿ ಉಂಡು ಮಲಗಿದಂತೆ  ಕಾಣುತ್ತಿರುವ ವಿಡಿಯೋವೊಂದು ವೈರಲ್​ ಆಗಿದೆ.

ಕರೊನಾ ಐಸಿಯುನಲ್ಲಿ  ಸೋಂಕಿತರ ಪಕ್ಕದಲ್ಲಿ ಅಟೆಂಡರ್ಸ್ ಹಾಗೂ ಸಂಬಂಧಿಗಳು ಮಲಗಿರುವ ದೃಶ್ಯ ಎಂಥವರನ್ನು ಭಯಭೀತಗೊಳಿಸುತ್ತದೆ. ಸೋಂಕಿತ ಅಂತಾ ಕೂಡ ನೋಡದೆ ರೋಗಿಯ ಜೊತೆ ಒಂದೇ ಬೆಡ್‌ನಲ್ಲಿ ಅಟೆಂಡರ್ ಹಾಗೂ ಸಂಬಂಧಿಗಳು ಮಲಗುತ್ತಾರೆ.‌ ಕಾಟ್ ಖಾಲಿ ಇರದಿದ್ರೆ ಸಂಬಂಧಿಗಳು ನೆಲದ ಮೇಲೆ ಹಾಸಿಗೆ ಹಾಸಿಕೊಂಡೇ ನಿರ್ಭಯವಾಗಿ ಮಲಗುತ್ತಾರೆ.

ಕಿಮ್ಸ್ ನ ಐಸಿಯುನಲ್ಲಿ‌ ಸೋಂಕಿತರಿಗಿಂತ ಅಟೆಂಡರ್​ಗಳೇ ಜಾಸ್ತಿ ಇದ್ದಾರೆ. ಯಾವುದೇ ಮಾಸ್ಕ್ ಇಲ್ಲ, ಸಾಮಾಜಿಕ ಅಂತರವಿಲ್ಲ, ಸುರಕ್ಷತೆ‌ಯೂ ಇಲ್ಲಿ ಇಲ್ಲ. ‌ಅಟೆಂಡರ್​ಗಳಿಗೆ ವೈದ್ಯರು ಸಾಕಷ್ಟು ಬಾರಿ ಹೇಳಿದಾರೆ.  ಸೋಂಕಿತರಿಗೆ  ಊಟ-ಉಪಹಾರ ನೀಡುವ ನೆಪದಲ್ಲಿ ಅಟೆಂಡರ್​ಗಳು ಹಾಗೂ ಸಂಬಂಧಿಗಳು ಐಸಿಯುನಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ ಎನ್ನಲಾಗಿದೆ.

ಧಾರವಾಡ ಜಿಲ್ಲೆಯಲ್ಲಿ ದಿನೇ ದಿನೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಇಂತಹ ದೃಶ್ಯ ಕಂಡುಬಂದಿದೆ. ಆಸ್ಪತ್ರೆಯಲ್ಲಿನ ವ್ಯವಸ್ಥೆ ಹೀಗೆ ಮುಂದುವರಿದರೆ  ಕರೊನಾ ಸೋಂಕು ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ