ಇಂಗ್ಲೆಂಡ್ ವಿರುದ್ಧದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಭಾರತಕ್ಕೆ ಸೋಲು

Share

ಇಂಗ್ಲೆಂಡ್: ಬರ್ಮಿಂಗ್ ಹ್ಯಾಮ್ ನಲ್ಲಿ ಭಾನುವಾರ ಭಾರತ ಹಾಗೂ ಇಂಗ್ಲೆಂಡ್ ನಡುವೆ ನಡೆದ ಐಸಿಸಿ 2019 ಏಕದಿನ ವಿಶ್ವಕಪ್‌ ಲೀಗ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಟೀಂ ಇಂಡಿಯಾ ವಿರುದ್ಧ 31 ರನ್ ಗಳ ಅಂತರದ ಗೆಲುವು ಸಾಧಿಸಿತು.
ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ ಭಾರತಕ್ಕೆ 338 ರನ್ ಗುರಿ ನೀಡಿತ್ತು. ಆದರೆ ಟೀಂ ಇಂಡಿಯಾ ನಿಗಧಿತ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 306 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ಮೊದಲ ವಿಶ್ವಕಪ್ ಪಂದ್ಯದಲ್ಲೂ ಭಾರತ ವಿರುದ್ಧ ಇಂಗ್ಲೆಂಡ್ ಗೆಲುವು:
ಭಾರತ-ಇಂಗ್ಲೆಂಡ್ ವಿಶ್ವಕಪ್‌ನಲ್ಲಿ ಮೊದಲ ಮುಖಾಮುಖಿಯಾಗಿದ್ದು 1975ರಲ್ಲಿ ಲಾರ್ಡ್ಸ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ. ಇದರಲ್ಲಿ ಇಂಗ್ಲೆಂಡ್ ಭರ್ಜರಿ 202 ರನ್‌ಗಳಿಂದ ಗೆದ್ದಿತ್ತು. ಮುಂದೆ 1983 ರಲ್ಲಿ ಭಾರತ 6 ವಿಕೆಟ್ ಜಯ, 1987ರಲ್ಲಿ ಇಂಗ್ಲೆಂಡ್ 35 ರನ್ ಗೆಲುವು, 1992ರಲ್ಲಿ ಆಂಗ್ಲರು 9 ರನ್ ಜಯ, 1999ರಲ್ಲಿ ಭಾರತಕ್ಕೆ 63 ರನ್ ಗೆಲುವು, 2003ರಲ್ಲೀ ಭಾರತ 82 ರನ್ ಜಯಭೇರಿ ಬಾರಿಸಿತ್ತು. ಆದರೆ 2011ರ ಪಂದ್ಯ ಟೈ ಅನ್ನಿಸಿತ್ತು. ಆ ಪಂದ್ಯದಲ್ಲಿ ಎರಡೂ ತಂಡಗಳೂ 338 ರನ್ ಬಾರಿಸಿ ಸಮಬಲ ಸಾಧಿಸಿದ್ದವು.