ಹಾವೇರಿ 12 ಮಂದಿಗೆ ಕೋವಿಡ್ ಸೋಂಕು ದೃಢ

Share

ಹಾವೇರಿ: ಜಿಲ್ಲೆಯ ಹಾನಗಲ್ ಪಟ್ಟಣದ ಮೂವರು ಆಶಾ ಕಾರ್ಯಕರ್ತೆಯರು ಹಾಗೂ ಹಿರೇಕೆರೂರ ತಾಲ್ಲೂಕಿನ ಮಾಸೂರ ಗ್ರಾಮದ ಓರ್ವ ಸರ್ಕಾರಿ ವೈದ್ಯ ಸೇರಿದಂತೆ 12 ಜನರಿಗೆ ಭಾನುವಾರ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ಡಿಎಚ್ಒ ಡಾ. ರಾಜೇಂದ್ರ ದೊಡ್ಡಮನಿ

ಈವರೆಗೆ ಜಿಲ್ಲೆಯಲ್ಲಿ 68 ಕೋವಿಡ್ 19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 25 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 43 ಪ್ರಕರಣಗಳು ಜಿಲ್ಲೆಯಲ್ಲಿ ಸಕ್ರಿಯವಾಗಿದ್ದು, ಈ ಪೈಕಿ ಓರ್ವ ಸೋಂಕಿತ ವ್ಯಕ್ತಿಗೆ ಐ.ಸಿ.ಯು.ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಜಿಲ್ಲೆಯ 1170 ಜನರ ಮೇಲೆ ವೈದ್ಯಕೀಯ ನಿಗಾ ವಹಿಸಲಾಗಿದ್ದು, ಈವರೆಗೆ 10,298 ಜನರ ಗಂಟಲು ದ್ರವದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇವುಗಳಲ್ಲಿ 10,178 ಮಾದರಿಗಳನ್ನು ನೆಗೆಟಿವ್ ಬಂದಿವೆ. 120 ಮಾದರಿಗಳ ವರದಿ ಬಾಕಿ ಇದ್ದು, ಕೋವಿಡ್ ನಿಂದ ಜಿಲ್ಲೆಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ.