ಹಾವೇರಿ: ಶಿಗ್ಗಾವಿ ತಹಶೀಲ್ದಾರ್ ಗೆ ಕೋವಿಡ್ ದೃಢ, ಕಚೇರಿ ಸೀಲ್ ಡೌನ್

Share

ಹಾವೇರಿ‌: ಜಿಲ್ಲೆಯ ಶಿಗ್ಗಾವಿ ತಹಶೀಲ್ದಾರ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟ ಕಾರಣ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಶುಕ್ರವಾರ ಅವರನ್ನು ದಾಖಲಿಸಲಾಗಿದೆ.

ಶಿಗ್ಗಾವಿ ತಾಲ್ಲೂಕಿನಲ್ಲಿ ಕೊರೊನಾ ಸೋಂಕು ಹೆಚ್ಚಾಗಿದ್ದರಿಂದ ಗಲ್ಲಿ-ಗಲ್ಲಿಗೂ ತಿರುಗಾಡಿ, ಅವರು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದರು.

ತಹಶೀಲ್ದಾರ್ ಅವರಿಗೆ ಸೋಂಕು ದೃಢಪಟ್ಟಿರುವುದನ್ನು ಖಚಿತ ಪಡಿಸಿರುವ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು, ತಹಶೀಲ್ದಾರ್ ಕಚೇರಿಯನ್ನು ಸೀಲ್ ಡೌನ್ ಮಾಡಲು ಆದೇಶ ಹೊರಡಿಸಿದ್ದಾರೆ.