ಹಾವೇರಿಯಲ್ಲಿ ಶುಕ್ರವಾರ ಮೂರು ಹೊಸ ಕೋವಿಡ್ 19 ಪ್ರಕರಣಗಳು ಪತ್ತೆ : ಜಿಲ್ಲೆಯಲ್ಲಿ ಸೋಂಕಿತ ಸಂಖ್ಯೆ 6 ಏರಿಕೆ

Share

ಹಾವೇರಿ: ಜಿಲ್ಲೆಯಲ್ಲಿ ಶುಕ್ರವಾರ 3 ಹೊಸ ಕೋವಿಡ್ 19 ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 6 ಕ್ಕೆ ಏರಿಕೆಯಾಗಿದೆ.

ಮಹಾರಾಷ್ಟ್ರ ದಿಂದ ಜಿಲ್ಲೆಗೆ ಆಗಮಿಸಿದ 28 ವರ್ಷದ ಮಹಿಳೆ, 22 ವರ್ಷದ ಪುರುಷ ಹಾಗೂ ಕಂಟೈನ್ ಮೆಂಟ್ ಜೋನ್ ನಲ್ಲಿ ಸಂಪರ್ಕ ಹೊಂದಿದ 55 ವರ್ಷದ ಮಹಿಳೆಗೆ ಹೊಸದಾಗಿ ಸೋಂಕು ಇರುವುದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ.

ಸೋಂಕಿತರ ಟ್ರಾವೆಲ್ ಹಿಸ್ಟರಿಯ ಬಗ್ಗೆ ಹಾವೇರಿ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಮಾಹಿತಿ ನೀಡಿದ್ದು, ಶಿಗ್ಗಾಂವಿ ತಾಲ್ಲೂಕಿನ ಬಂಕಾಪುರ ಪಟ್ಟಣದ 22 ವರ್ಷದ P-1689 ಲಾರಿ ಡ್ರೈವರ್ ಮೆಣಸಿನಕಾಯಿ ವ್ಯಾಪಾರಿಯಾಗಿದ್ದು, ಬಾಡಿಗೆ ರೂಮ್ ನಲ್ಲಿ ವಾಸವಾಗಿದ್ದಾನೆ. ಸೋಂಕಿತ ಸದ್ಯ ಬೆಂಗಳೂರಿಗೆ ಅನಾನಸ್ ಹಣ್ಣು ತೆಗೆದುಕೊಂಡು ಹೊಗಿದ್ದಾನೆ. ಸೋಂಕಿತ ಮೇ. 05, 08 ಹಾಗೂ 12 ರಂದು ಮಹಾರಾಷ್ಟ್ರದ ವಾಸಿ ಮಾರುಕಟ್ಟೆಗೆ ಮೆಣಸಿನಕಾಯಿ ತೆಗೆದುಕೊಂಡು ಹೋಗಿ ಬಂದಿದ್ದಾನೆ.

ಶುಕ್ರವಾರ ಹಾವೇರಿ ಜಿಲ್ಲೆಯಲ್ಲಿ ಹೊಸದಾಗಿ ಪತ್ತೆಯಾದ ಕೋವಿಡ್19 ಪ್ರಕರಣಗಳ ಕುರಿತು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಮಾಹಿತಿ ನೀಡಿದ್ದಾರೆ.

ಜಿಲ್ಲೆಯ ಸವಣೂರು ತಾಲ್ಲೂಕಿನ ಯಲುವಿಗಿ ಗ್ರಾಮದ 27 ವರ್ಷದ ಮಹಿಳೆಗೆ ಸೋಂಕು ತಗುಲಿದ್ದು, P-1691 ಎಂದು ಗುರುತಿಸಲಾಗಿದೆ. ಸೋಂಕಿತೆ ಬಿಎಸ್ಸಿ ನರ್ಸಿಂಗ್ ವ್ಯಾಸಂಗ ಮಾಡಿದ್ದು, 2 ತಿಂಗಳ ಹಿಂದೆ ಸಿಎಚ್ಓ ತರಬೇತಿಗೆ ಮುಂಬೈ ತೆರಳಿದ್ದಳು.

ಮೇ.18 ರಂದು ಮಹಾರಾಷ್ಟ್ರದಿಂದ ಯಲುವಿಗಿ ಆಗಮಿಸಿದ್ದ ಸೋಂಕಿತಳನ್ನು ಜಿಲ್ಲಾಡಳಿತ ಕ್ವಾರಂಟೈನ್ ಗೆ ಒಳಪಡಿಸಿತ್ತು.

ಸವಣೂರು ಪಟ್ಟಣದ ಎಸ್ ಎಮ್ ಕೃಷ್ಣಾ ಬಡಾವಣೆಯ ನಿವಾಸಿ 55 ವರ್ಷದ ಮಹಿಳೆಗೆ ಶುಕ್ರವಾರ ಸೋಂಕು ಇರುವುದು ಪತ್ತೆಯಾಗಿದೆ‌. ಸೋಂಕಿತಳನ್ನು P- 1690 ಎಂದು ಗುರುತಿಸಲಾಗಿದೆ. ಸೋಂಕಿತಳು P- 639 ಹಾಗೂ P- 672 ಮನೆಯ ಸಮೀಪದ ನಿವಾಸಿಯಾಗಿದ್ದಾಳೆ.

ಈ ಎಲ್ಲ ಸೋಂಕಿತರ ಮನೆಯ ಸುತ್ತಮುತ್ತಲಿನ 100 ಮೀಟರ್ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದ್ದು, ಸೋಂಕಿತರು ವಾಸಿಸುತ್ತಿರುವ ಸುತ್ತಮುತ್ತಲಿನ 7 ಕಿ.ಮೀ ಪ್ರದೇಶವನ್ನು ಬಫರ್ ಝೂನ್ ಎಂದು ಪ್ರಕಟಿಸಲಾಗಿದೆ ಎಂದು ಹಾವೇರಿ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ತಿಳಿಸಿದ್ದಾರೆ.

ಈ ಮೂವರನ್ನು ಕೋವಿಡ್ ಜಿಲ್ಲಾಸ್ಪತ್ರೆಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.