ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 1056 ಕ್ಕೆ ಏರಿಕೆ! ಶುಕ್ರವಾರ 69 ಹೊಸ ಪ್ರಕರಣ ಪತ್ತೆ

ಸಾಂದರ್ಭಿಕ ಚಿತ್ರ

Share

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ನಾಗಾಲೋಟ ಮುಂದುವರೆದಿದ್ದು, ಗುರುವಾರ ಸಂಜೆ 5 ಗಂಟೆಯಿಂದ ಶುಕ್ರವಾರ ಸಂಜೆಯವರೆಗೆ 69 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ ಒಟ್ಟು ಸಂಖ್ಯೆ 1056 ಕ್ಕೆ ಏರಿಕೆಯಾಗಿದೆ.

ಬೆಂಗಳೂರು ನಗರ 13, ದಕ್ಷಿಣ ಕನ್ನಡ 15, ಮಂಡ್ಯ 13, ಹಾಸನ 7, ಬೀದರ್ 7, ಉಡಪಿ 5, ಕಲಬುರ್ಗಿ 3, ಚಿತ್ರಗುರ್ಗ 2, ಹಾಗೂ ಕೋಲಾರ, ಶಿವಮೊಗ್ಗ, ತುಮಕುರು, ಬಾಗಲಕೋಟೆಯಲ್ಲಿ ತಲಾ 1 ಹೊಸ ಪ್ರಕರಣ ದಾಖಲಾಗಿದೆ. ಈವರೆಗೆ ರಾಜ್ಯದಲ್ಲಿ 480 ಜನರು ಚಿಕಿತ್ಸೆ ಪಡೆದು ಮನಗೆ ತೆರಳಿದ್ದಾರೆ. ರಾಜ್ಯದಲ್ಲಿ ದೃಢಪಟ್ಟ ಒಟ್ಟು 1056 ಕೋವಿಡ್19 ಪೈಕಿ 36 ಜನರು ಮರಣ ಹೊಂದಿದ್ದಾರೆ.

(ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಕುರಿತಾದ ಮಾಹಿತಿ)

ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 81,970 ಕ್ಕೆ ಹೆಚ್ಚಳವಾಗಿದ್ದು, 2649 ಜನ ಸೋಂಕಿನಿಂದ ಮೃತ ಪಟ್ಟಿದ್ದಾರೆ. ಒಟ್ಟು ಸೋಂಕಿತರಲ್ಲಿ 27,920 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.