ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆ: ಶಾಸಕ ನೆಹರು ಓಲೇಕಾರ

????????????????????????????????????

Share

ಹಾವೇರಿ: ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ. ಗ್ರಾಮೀಣ ಪ್ರದೇಶದಲ್ಲಿರುವ ಮಕ್ಕಳ ಪ್ರತಿಭೆಯು ಶಿಕ್ಷಕರಿಂದ ಪ್ರತಿಭಾನ್ವೇಷಣೆಯಾಗಿ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಕ್ಕಳನ್ನು ಪ್ರೋತ್ಸಾಹಿಸಬೇಕು ಎಂದು ಶಾಸಕರಾದ ನೆಹರು ಓಲೇಕಾರ ಅವರು ಹೇಳಿದರು.

ನಗರದ ಶಿವಬಸವ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯತ, ಸರ್ವಶಿಕ್ಷಣ ಅಭಿಯಾನ, ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಜರುಗಿದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ, ಸಾಂಸ್ಕøತಿಕ ಶೈಕ್ಷಣಿಕ ಸ್ಪರ್ಧೆಗಳ ಕಾರ್ಯಕ್ರಮಕ್ಕೆ ಡೊಳ್ಳು ಬಾರಿಸುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರತಿಭಾ ಕಾರಂಜಿಯು ಚೈತನ್ಯದ ಚಿಲುಮೆಯಾಗಿದ್ದು, ಮಕ್ಕಳು ಯಾವಾಗಲೂ ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ. ಇಂತಹ ಕಾರ್ಯಕ್ರಮದಲ್ಲಿ ಎಲ್ಲ ಪ್ರತಿಭೆಗಳು ಭಾಗವಹಿಸುತ್ತವೆ. ಶಿಕ್ಷಕರ ಪರಿಶ್ರಮದಿಂದ ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ತಾಲೂಕಾ ಮಟ್ಟದಲ್ಲಿ ವಿಜೇತ ಮಕ್ಕಳು ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿದ್ದಾರೆ. ಇಲ್ಲಿ ನಿರ್ಣಾಯಕರು ನಿಷ್ಠುರವಾಗಿ ನಿಸ್ಪಕ್ಷಪಾತವಾಗಿ ಉತ್ತಮ ಪ್ರತಿಭೆಗಳನ್ನು ಆಯ್ಕೆಮಾಡಬೇಕು. ಈ ಮಕ್ಕಳು ವಿಭಾಗೀಯ ಮಟ್ಟದಲ್ಲಿ ಭಾಗವಹಿಸಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸ್ಪರ್ಧೆಯಲ್ಲಿ ವಿಜೇತರಾಗಿ ಜಿಲ್ಲೆಗೆ ಕೀರ್ತಿ ತರಬೇಕು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ರಮೇಶ ದುಗ್ಗತ್ತಿ ಮಾತನಾಡಿ, ನಮ್ಮ ಸಮಾಜದಲ್ಲಿ ಹಿಂದಿನ ಮತ್ತು ಇಂದಿನ ಶಿಕ್ಷಣ ಪದ್ಧತಿ ನೋಡಿದಾಗ ಶಿಕ್ಷಣದಲ್ಲಿ ಬದಲಾವಣೆ ಕ್ರಾಂತಿ ಉಂಟಾಗಿದೆ ಹಾಗೂ ಶಿಕ್ಷಣ ಡಿಜಿಟಲೀಕಣವಾಗಿದೆ. ಪ್ರತಿಭಾ ಕಾರಂಜಿ ಕಾರ್ಯಕ್ರಮ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಅನಾವರಣಗೊಳಿಸುವುದಗೋಸ್ಕರ ಆಯೋಜಿಸಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಬೆನ್ನುಲಾಬಾಗಿ ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಂದಾನಪ್ಪ ವಡಿಗೇರಿ ಅವರು ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆಗಳು ಅವರಿಗೆ ಕಲಾಬದುಕನ್ನು ತಂದುಕೊಡುವಲ್ಲಿ ಸಹಾಯಕವಾಗುತ್ತವೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಶಿಕ್ಷಕರಿಂದ ಮಾರ್ಗದರ್ಶನ ಹಾಗೂ ಪರಿಣಿತರಿಂದ ತರಬೇತಿ ಅವಶ್ಯಕ. ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದಾಗ ಪ್ರತಿಭೆಯು ಮಕ್ಕಳನ್ನು ರಿಯಾಲಿಟಿಶೋಗಳಲ್ಲಿ ಭಾಗವಹಿಸಲು ಕಾರಣವಾಗುತ್ತವೆ. ರುಬೀನಾ, ಕುರಿಗಾಹಿ ಹನುಮಂತ ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ. ಪ್ರತಿಭೆಯೆಂಬ ನೀರು ಕಾರಂಜಿಯಾಗಿ ದೇಶಾದ್ಯಂತ ಚಲ್ಲಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿಯವರು ಆಶಿರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿ ರಾಷ್ಟ್ರಮಟ್ಟದ ನೃತ್ಯಕಲೋತ್ಸವದಲ್ಲಿ ಭಾಗವಹಿಸಿದ ರಾಣೇಬೆನ್ನೂರು ಮಾರುತಿ ನಗರದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳನ್ನು ಹಾಗೂ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಕನ್ನಡ ಭಾಷಣದಲ್ಲಿ ಪ್ರಥಮ ಸ್ಥಾನಪಡೆದ ಗೌತಮಿ ಹಾಗೂ ಉರ್ದು ಭಾಷಣದಲ್ಲಿ ಪ್ರಥಮ ಸ್ಥಾನ ಪಡೆದ ಮುಸರತ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಹೆಚ್. ಪಾಟೀಲ, ಹುಕ್ಕೇರಿಮಠದ ಶಿವಲಿಂಗೇಶ್ವರ ವಿದ್ಯಾಪೀಠದ ಚೇರಮನ್ನ ಶಿವಬಸಪ್ಪ ಮುಷ್ಠಿ, ಶಿವಬಸವೇಶ್ವರ ಕಲ್ಯಾಣ ಮಂಟಪದ ಚೇರಮನ್ನ ರಾಚಪ್ಪ ಮಾಗನೂರ, ಶಿವಲಿಂಗೇಶ್ವರ ನಿತ್ಯದಾಸೋಹ ಸಮಿತಿಯ ಚೇರಮನ್ನ ಶಿವಯೋಗೆಪ್ಪ ವಾಲಿಶೆಟ್ರ, ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸಾಂಸ್ಕøತಿಕ ಶೈಕ್ಷಣಿಕ ಸ್ಪರ್ಧೆಗಳ ನೊಡಲ್ ಅಧಿಕಾರಿ ಈರಪ್ಪ ಲಮಾಣಿ, ಜೆ.ಆರ್. ಯಲವದಹಳ್ಳಿ, ಎಚ್.ಪಿ.ಬಣಕಾರ, ಎಸ್.ಜಿ.ಕೋರಿ, ಎಂ.ಜಿ.ಹಿರೇಮಠ, ಕೆ.ವೈ.ಅಣ್ಣಿಗೇರಿ, ಹೆಚ್.ಎನ್. ಪಾಟೀಲ, ಎಸ್.ಸಿ. ಕಲ್ಮನಿ, ನಾಗರಾಜ ನಡುವಿನಮಠ ಹಾಗೂ ಮತ್ತಿತರರು ಉಪಸ್ಥಿತರಿದ್ದರು.