ಅ. 31 ರಂದು ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

Share

ಹಾವೇರಿ: ನಗರದ ಯೂತ ಎಂಪ್ಲಾಯೆಬಿಲಿಟಿ ಸರ್ವಿಸ್ ಸೆಂಟರ್ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯಲ್ಲಿ ಅಕ್ಟೋಬರ್ 31 ರಂದು ಬೆಳಿಗ್ಗೆ 10 ಘಂಟೆಯಿಂದ 3 ಗಂಟೆಯವರೆಗೆ ನೇರ ಸಂದರ್ಶನ ಆಯೋಜಿಸಲಾಗಿದೆ.

ಖಾಸಗಿ ಸಂಸ್ಥೆಗಳಾದ ಹಾವೇರಿಯ ನವಚೇತನ ಮೈಕ್ರೋಫಿನ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್, ಹುಬ್ಬಳ್ಳಿಯ ಇಂಡಿಯನ್ ಮನಿ. ಕಾಮ್, ರಾಣೆಬೆನ್ನೂರಿನ ಹ್ಯಾಪಿ ಮೈಂಡ್ಸ್ ಸಲುಶನ್, ಹಾಗೂ ಉಡುಪಿಯ ಬಿಎಸ್‍ಎಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗಳಿಗೆ ಅಕೌಂಟಂಟ್, ಕ್ರೇಡಿಟ್ ಮ್ಯಾನೇಜರ್, ರಿಲೇಶನ್‍ಶಿಪ್ ಮ್ಯಾನೇಜರ್, ಫೀಲ್ಡ್ ಆಫಿಸರ್, ಟ್ರೇನಿಂಗ್ ಮ್ಯಾನೇಜರ್, ಬ್ರ್ಯಾಂಚ್ ಮ್ಯಾನೇಜರ್ ಹಾಗೂ ಕಸ್ಟ್‍ಮರ್ ಸರ್ವಿಸ್ ರಿಪ್ರಸೆಂಟೆಟೀವ್ ಹುದ್ದೆಗಳಿಗೆ ಸಂದರ್ಶನ ನಡೆಸಲಾಗುತ್ತದೆ.

ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಬಿ.ಎ, ಬಿ.ಕಾಂ, ಬಿ.ಬಿ.ಎ, ಹಾಗೂ ಬಿ.ಬಿ.ಎಂ ವಿದ್ಯಾರ್ಹತೆಯನ್ನು ಹೊಂದಿದ 18 ರಿಂದ 30 ವರ್ಷದೊಳಗಿರುವ ಉದ್ಯೋಗಾಕಾಂಕ್ಷಿ ಯುವಕ-ಯುವತಿಯರು ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಕನಿಷ್ಠ 4 ಬಯೋಡಾಟಾ, 1ಇತ್ತೀಚಿನ ಭಾವಚಿತ್ರ, ವಿದ್ಯಾರ್ಹತೆಯ ಮತ್ತು ಆಧಾರ ಕಾರ್ಡ ಝರಾಕ್ಸ ಪ್ರತಿಯೊಂದಿಗೆ ಹಾಜರಾಗಲು ಪ್ರಕಟಣೆ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ಕಚೇರಿಯ ವೇಳೆಯಲ್ಲಿ ದೂರವಾಣಿ ಸಂಖ್ಯೆ 08375-249291, ಮೊ:9481930137/ 9743246128/ 6360112870 ಸಂಪರ್ಕಿಸಲು ಕೋರಿದೆ.