ಭೂ ಕುಸಿತ ಹಿನ್ನೆಲೆ ರೈಲು ಸಂಚಾರ ರದ್ದು

Share

ಹುಬ್ಬಳ್ಳಿ: ಬಿರೂರ – ಚಿಕ್ಕಜಾಜೂರ ಸೆಕ್ಷನ್ ನಡುವೆ ಸಂಭವಿಸಿದ ಭೂ ಕುಸಿತ ಹಿನ್ನಲೆಯಲ್ಲಿ ಜೂ. 25 ಹಾಗೂ 26 ರಂದು ಹುಬ್ಬಳ್ಳಿ – ಬೆಂಗಳೂರು – ಹುಬ್ಬಳ್ಳಿ ಪ್ಯಾಸೆಂಜರ್ (56912/56911 ಹಾಗೂ 56914/56913) ಹಾಗೂ ಹೊಸಪೇಟೆ – ಬೆಂಗಳೂರು – ಹೊಸಪೇಟೆ ಪ್ಯಾಸೆಂಜರ್ (56910/56909) ರೈಲು ಸಂಚಾರವನ್ನು ರದ್ದುಪಡಿಸಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.