ಪಡಿತರ ದಾಸ್ತಾನಿಗಾಗಿ ಪ್ರತ್ಯೇಕ ಗೋಡೌನ್ ನಿರ್ಮಿಸಲು ಜಮೀನು ಗುರುತಿಸಲು ಸಚಿವ ಕೆ.ಗೋಪಾಲಯ್ಯ ಸಲಹೆ

Share

ಹಾವೇರಿ: ನಗರದಲ್ಲಿರುವ ಕೆ.ಎಫ್.ಸಿ.ಎಸ್.ಸಿ. ಗೋಡೌನ್‍ಗೆ ಬುಧವಾರ ಭೇಟಿ ನೀಡಿದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಖಾತೆ ಸಚಿವ ಕೆ.ಗೋಪಾಲಯ್ಯ ಅವರು ಪಡಿತರ ಅಕ್ಕಿ ಹಾಗೂ ತೊಗರಿಬೇಳೆ ದಾಸ್ತಾನು ಪರಿಶೀಲನೆ ನಡೆಸಿದರು.

ಕೊರೋನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಪಡಿತರದಾರರಿಗೆ ಆಹಾರ ಸಾಮಗ್ರಿಗಳ ವಿತರಣೆ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪರಿಶೀಲನಾ ಸಭೆ ನಡೆಸಿದ ತರುವಾಯು ಅಕ್ಕಿ ಮತ್ತು ತೊಗರಿಬೇಳೆಯ ಗುಣಮಟ್ಟ ಕುರಿತಂತೆ ಖುದ್ದಾಗಿ ಪರಿಶೀಲಿಸಲು ಗೋಡೌನ್‍ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಆಹಾರ ಇಲಾಖೆಯ ಪಡಿತರ ದಾಸ್ತಾನಿಗಾಗಿ ಪ್ರತ್ಯೇಕವಾದ ಗೋಡೌನ್ ನಿರ್ಮಾಣದ ಅವಶ್ಯಕತೆ ಇದ್ದು, ಕನಿಷ್ಟ ಐದಾರು ಎಕರೆ ಭೂಮಿಯನ್ನು ಗುರುತಿಸಿ ಕೊಡುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು. ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಹಾವೇರಿ ವಿಧಾನಸಭಾ ಕ್ಷೇತ್ರದ ಶಾಸಕ ನೆಹರು ಓಲೇಕಾರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ವಿನೋದಕುಮಾರ ಹೆಗ್ಗಳಗಿ ಸೇರಿದಂತೆ ಇತರರು ಇದ್ದರು.