ಪಂಚಾಯತಿ ಚುನಾವಣೆ ಘೋಷಣೆ ಬೆನ್ನಲ್ಲೇ ಸ್ಥಳ ಪರಿಶೀಲಿಸಿದ ಪಿಡಿಓ

Share

ಗದಗ: ಗ್ರಾ.ಪಂ ಚುನಾವಣೆ ಘೋಷಣೆ ಬೆನ್ನಲ್ಲೇ ಗದಗ ಜಿಲ್ಲೆಯ ಗಜೇಂದ್ರಗಡ ಸಮೀಪದ ಗೋಗೇರಿ ಗ್ರಾಮ ಪಂಚಾಯತಿ ಪಿಡಿಓ ಶರಣಪ್ಪ ನರಗೇಲ್ಲ ಬೂತ್ ವೀಕ್ಷಣೆ ಮಾಡಿದರು.

ಗೋಗೇರಿ ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೂತ್ ಮಾಡಲು ಈಗಾಗಲೇ ತಯಾರಿ ನಡೆಸಿದರು. ಗ್ರಾಮ ಪಂಚಾಯತ್ ವತಿಯಿಂದ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಿಗ ವಹಿಸಲಾಗುವುದು ಎಂದು ಪಿಡಿಓ ಶರಣಪ್ಪ ಹಳ್ಳಿವಾಣಿಗೆ ಮಾಹಿತಿ ನೀಡಿದರು.