ನೂತನ ಸಂಚಾರ ನಿಯಮದ ದಂಡದ ಮೊತ್ತ ಇಳಿಸಿದ ರಾಜ್ಯ ಸರಕಾರ

Share

ಬೆಂಗಳೂರು: ನೂತನ ಮೋಟಾರು ವಾಹನ ಕಾಯ್ದೆಯಡಿ ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಭಾರೀ ದಂಡ ವಿಧಿಸುತ್ತಿರುವ ಬಗ್ಗೆ ಈಗಾಗಲೇ ವಾಹನ ಸವಾರರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ನೂತನ ಸಂಚಾರ ನಿಯಮ ಉಲ್ಲಂಘನೆಯ ದಂಡದ ಮೊತ್ತವನ್ನು ರಾಜ್ಯ ಸರಕಾರ ಇಳಿಕೆ ಮಾಡಿ ಶನಿವಾರ ಆದೇಶ ಹೊರಡಿಸಿದೆ.

ಸೆಪ್ಟೆಂಬರ್ 3ರಿಂದ ಕೇಂದ್ರದ ನೂತನ ಮೋಟಾರು ವಾಹನ ಕಾಯ್ದೆ ದೇಶಾದ್ಯಂತ ಜಾರಿಗೊಂಡಿತ್ತು. ಸಂಚಾರ ನಿಯಮ ಉಲ್ಲಂಘಿಸಿದ್ದ ವಾಹನ ಸವಾರರಿಗೆ ಭಾರೀ ಮೊತ್ತದ ದಂಡ ಬಿಸಿ ಮುಟ್ಟಿಸಿತ್ತು.

ಭಾರೀ ದಂಡದ ಮೊತ್ತ ಬಿಸಿ ತಾಗುತ್ತಿದ್ದಂತೆಯೇ ದೇಶದ ಹಲವೆಡೆ ವಾಹನ ಸವಾರರು ಅಸಮಾಧಾನ ಹೊರಹಾಕತೊಡಗಿದ್ದರು. ಇದರಿಂದಾಗಿ ಕೇಂದ್ರ ಸರಕಾರ ತೆಗೆದುಕೊಂಡಿರುವ ಕೆಲವು ನಿರ್ಧಾರಗಳಿಗೆ ರಾಜ್ಯ ಸರಕಾರಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.

ರಾಜ್ಯ ಸರ್ಕಾರ ಇಂದು ಸಂಚಾರ ನಿಯಮ ಉಲ್ಲಂಘನೆಯ ದಂಡ ಮೊತ್ತವನ್ನು ಇಳಿಕೆ ಮಾಡಿ ಆದೇಶ ಹೊರಡಿಸಿದ್ದು, ಹೆಲ್ಮೆಟ್ ಧರಿಸದಿದ್ದರೆ 500 ರೂ., ಮದ್ಯ ಸೇವಿಸಿ ವಾಹನ ಚಲಾಯಿಸಿದರೆ 10 ಸಾವಿರ ರೂ. ದಂಡ (ಇದನ್ನು ಹಾಗೆ ಉಳಿಸಿಕೊಳ್ಳಲಾಗಿದೆ) ಹಾಗೂ ಲೈಸೆನ್ಸ್‌ ಇಲ್ಲದಿದ್ದರೆ ಈ ಮೊದಲು 5 ಸಾವಿರ ರೂ. ದಂಡ ವಿಧಿಸಲಾಗಿತ್ತು. ಅದನು ಈಗ 1 ಸಾವಿರ ರೂ.ಗೆ ಇಳಿಕೆ ಮಾಡಲಾಗಿದೆ.

ನೂತನ ಆದೇಶದ ಪ್ರಕಾರ ದಂಡದ ಮೊತ್ತ…

  • ಹೆಲ್ಮೆಟ್ ಧರಿಸದಿದ್ರೆ 500 ರೂಪಾಯಿ ದಂಡ
  • ಸೀಟ್ ಬೆಲ್ಟ್ ಧರಿಸದಿದ್ರೆ 500 ರೂ. ದಂಡ
  • ಸುರಕ್ಷತಾ ಕ್ರಮ ಅನುಸರಿಸದಿದ್ರೆ ₹500 ದಂಡ
  • ರಸ್ತೆ ನಿಯಮ ಉಲ್ಲಂಘನೆಗೆ 1000 ರೂ. ದಂಡ
  • ಇನ್ಶೂರೆನ್ಸ್ ಇಲ್ಲದಿದ್ರೆ(ಬೈಕ್, ಆಟೋ)-₹2000 ದಂಡ
  • ಇನ್ಶೂರೆನ್ಸ್ ಇಲ್ಲದಿದ್ರೆ(ಕಾರು, ಜೀಪ್)-₹3000 ದಂಡ
  • ಇನ್ಶೂರೆನ್ಸ್ ರಹಿತ(ಭಾರಿ ವಾಹನ)-₹5000 ದಂಡ
  • ಲೈಸೆನ್ಸ್ ಇಲ್ಲದಿದ್ರೆ 1,000 ರೂಪಾಯಿ ದಂಡ
  • ಆಂಬುಲೆನ್ಸ್​ಗೆ ದಾರಿ ಬಿಡದಿದ್ರೆ ₹1,000 ದಂಡ
  • ಅನಧಿಕೃತ ವ್ಯಕ್ತಿ ಚಾಲನೆ(ಬೈಕ್, ತ್ರಿಚಕ್ರ)-1000 ರೂ.
  • ಅನಧಿಕೃತ ವ್ಯಕ್ತಿ ಚಾಲನೆ(ಕಾರು, ಜೀಪ್)-2000 ರೂ.
  • ಅನಧಿಕೃತ ವ್ಯಕ್ತಿ ಚಾಲನೆ(ಭಾರಿ ವಾಹನ)-5000 ರೂ.
  • ಅತಿವೇಗ ಚಾಲನೆ(ಬೈಕ್, ತ್ರಿಚಕ್ರ)-1,500 ರೂ.
  • ಅತಿವೇಗ ಚಾಲನೆ(ಕಾರು, ಜೀಪ್)-3000 ರೂ.
  • ಅತಿವೇಗ ಚಾಲನೆ(ಭಾರಿ ವಾಹನ)-5000 ರೂ.
  • ನೋಂದಣಿರಹಿತ ಚಾಲನೆ(ಬೈಕ್, ತ್ರಿಚಕ್ರ)-2000 ರೂ.
  • ನೋಂದಣಿರಹಿತ ಚಾಲನೆ(ಕಾರು, ಜೀಪ್)-3000 ರೂ.
  • ನೋಂದಣಿರಹಿತ ಚಾಲನೆ(ಕಾರು, ಜೀಪ್)-3000 ರೂ.
  • ನೋಂದಣಿರಹಿತ ಚಾಲನೆ(ಭಾರಿ ವಾಹನ)-5000 ರೂ.