ತಂಬಾಕು ಸೇವನೆ ದುಷ್ಪರಿಣಾಮ ಕುರಿತ ಲೇಖನ, ಹಾಡುಗಳ ಆಹ್ವಾನ

Share

ಹಾವೇರಿ: ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ತಂಬಾಕು ಸೇವನೆಗಳ ದುಷ್ಪರಿಣಾಮಗಳ ಕುರಿತ ಲೇಖನ ಹಾಗೂ ಸ್ವ ರಚಿತ ಹಾಡುಗಳನ್ನು ಆಹ್ವಾನಿಸಲಾಗಿದೆ.

ಆಸಕ್ತರು ತಂಬಾಕು ಸೇವನೆಗಳ ದುಷ್ಪರಿಣಾಮಗಳ ಕುರಿತ ಲೇಖನಗಳನ್ನು ಹಾಗೂ ಸ್ವರಚಿತ ಹಾಡುಗಳನ್ನು ಕಚೇರಿ ಮಿಂಚಂಚೆ ntcphaveri@gmail.com ಅಥವಾ ವಾಟ್ಸಾಪ್ ಸಂಖ್ಯೆ 9538556323 / 9535485248ಗೆ ಜೂನ್ 01 ರೊಳಗಾಗಿ ಕಳುಹಿಸಬೇಕು.

ಉತ್ತಮ ಲೇಖನ ಹಾಗೂ ಸ್ವರಚಿತ ಹಾಡುಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಲಾಗುವುದು ಎಂದು ಜಿಲ್ಲಾ ಸರ್ವೇಕ್ಷಣಾ ಘಟಕದ ಜಿಲ್ಲಾ ನೋಡಲ್ ಅಧಿಕಾರಿ ಡಾ.ಜಗದೀಶ್ ಪಾಟೀಲ ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:08375-233759ನ್ನು ಸಂಪರ್ಕಿಸಬಹುದು.