ಜಿಲ್ಲೆಯ ಮೌಲಾನಾ ಆಜಾದ ಶಾಲಾ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ

Share

ಹಾವೇರಿ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಇಲಾಖೆಯ ಮೌಲಾನಾ ಆಜಾದ್ ಮಾದರಿ ಶಾಲೆಯಲ್ಲಿ ಖಾಲಿ ಇರುವ ವಿವಿಧ ವಿಷಯಗಳ ಬೋಧನೆಗೆ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಹೊಸರಿತ್ತಿ, ಬ್ಯಾಡಗಿ, ಕಾಗಿನೆಲೆ, ಶಿರಗೋಡ, ರಾಣೇಬೆನ್ನೂರು, ಶಿಗ್ಗಾಂವ, ಬಂಕಾಪುರ, ಕುನ್ನೂರ ಹಾಗೂ ಸವಣೂರಿನಲ್ಲಿರುವ ಮೌಲಾನಾ ಆಜಾದ್ ಮಾದರಿ ಶಾಲೆಯಲ್ಲಿ ಸಮಾಜ ವಿಜ್ಞಾನ, ಉರ್ದು ಮತ್ತು ವಿಜ್ಞಾನ ವಿಷಯಗಳ ಬೋಧನೆ ಮಾಡಲು ಶಿಕ್ಷಕರು ಬೇಕಾಗಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ ಬೋಧನೆಮಾಡುವ ಸಾಮರ್ಥ್ಯ ಇರುವ ಬಿಇಡಿ ಪದವೀಧರರು ಅರ್ಜಿ ಸಲ್ಲಿಸಬಹುದು.

ನಿವೃತ್ತ ಶಿಕ್ಷಕರು ಅರ್ಜಿ ಸಲ್ಲಿಸಬಹುದು. ಮಾಹೆಯಾನ ಎಂಟು ಸಾವಿರ ರೂ.ಗೌರವಧನ ನೀಡಲಾಗುವುದು. ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲಾಗುವುದು. ಮಾರ್ಚ್ 2020ರವರೆಗೆ ಮಾತ್ರ ಸಿಮೀತವಾಗಿರುತ್ತದೆ. ನೇಮಕಾತಿ ಹೊಂದಿದ ಶಿಕ್ಷಕರು ಖಾಯಾಮಾತಿಗೆ ಹಾಗೂ ಕೃಪಾಂಕಕ್ಕೆ ಅರ್ಹರಿರುವುದಿಲ್ಲ.

ಮೇರಿಟ್ ಆಧಾರದ ಮೇಲೆ ನಿಯಮಾನುಸಾರ ನೇಮಕಾತಿ ನಡೆಯಲಿದೆ. ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಅರ್ಹ ಆಸಕ್ತರು ಶೈಕ್ಷಣಿಕ ದಾಖಲಾತಿಗಳೊಂದಿಗೆ ಅಭ್ಯರ್ಥಿಗಳು ನೇರವಾಗಿ ಆಯಾ ಶಾಲಾ ಮುಖ್ಯಸ್ಥರಿಗೆ ದಿನಾಂಕ 9-8-2019 ರೊಳಗೆ ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಯನ್ನು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಗಳ ಹಾವೇರಿ ಕಾರ್ಯಾಲಯದ ದೂರವಾಣಿ ಸಂಖ್ಯೆ:08375-234505ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಿ ಪಡೆಯಬಹುದಾಗಿದೆ.