ಎ.30 ರೊಳಗಾಗಿ ಬಿಎಸ್ 4 ವಾಹನಗಳ ನೊಂದಣಿಗೆ ಸೂಚನೆ

Share

ಹಾವೇರಿ: ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರ ಆದೇಶದನ್ವಯ ಭಾರತ್ ಸ್ಟೇಜ್-4 (ಬಿಎಸ್ 4) ಮಾಪನದ ವಾಹನಗಳ ನೊಂದಣಿಗೆ ಎ.30ರವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಲಕ್ಷ್ಮೀಕಾಂತ ನಾಲವಾರ ಅವರು ತಿಳಿಸಿದ್ದಾರೆ.

31 ಮಾರ್ಚ್ 2020ಕ್ಕಿಂತ ಮೊದಲು ಮಾರಾಟವಾಗಿ ತಾತ್ಕಾಲಿಕವಾಗಿ ನೊಂದಣಿ ಹೊಂದಿರುವ ಮತ್ತು ಆನ್‍ಲೈನ್ /ಆಫ್‍ಲೈನ್ ಮೂಲಕ ತೆರಿಗೆ ಹಾಗೂ ಶುಲ್ಕ ಪಾವತಿಸಿರುವ ಮತ್ತು ಪಾತಿಸಬೇಕಿರುವ ಹಾಗೂ Federation of Automobile Dealers Association ರವರು ಸರ್ವೋಚ್ಛ ನ್ಯಾಯಾಲಯಕ್ಕೆ ಅಫಿಡವಿಟ್ ಮೂಲಕ ಸಲ್ಲಿಸಿರುವ ಪಟ್ಟಿಯಲ್ಲಿ (ಅನುಬಂಧ ಎ ಮತ್ತು ಬಿ) ನಮೂದಿಸಿರುವ ಭಾರತ ಸ್ಟೇಜ್-4 ಮಾಪನದ ವಾಹನಗಳನ್ನು ದಿನಾಂಕ 30-04-2020ರವರೆಗೆ ಮಾತ್ರ ನಿಯಮಾನುಸಾರ ನೊಂದಣಿ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಆದ್ದರಿಂದ ವಾಹನ ಮಾಲೀಕರು ಭಾರತ್ ಸ್ಟೇಜ್-4(ಬಿ ಎಸ್ 4) ಮಾಪನದ ವಾನಗಳನ್ನು ಅಗತ್ಯ ದಾಖಲೆಗಳೊಂದಿಗೆ ಸಂಬಂಧಿಸಿದ ನೊಂದಣಿ ಪ್ರಾಧಿಕಾರದಲ್ಲಿ ದಿನಾಂಕ 30-04-2020ರೊಳಗಾಗಿ ನೊಂದಣಿ ಮಾಡಿಸಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.