ಉಚಿತವಾಗಿ ಕೃತಕ ಕೈ ಜೋಡಣೆ: ಹೆಸರು ನೋಂದಣಿಗೆ ಸೂಚನೆ

Share

ಹಾವೇರಿ: ಅಪಘಾತದಲ್ಲಿ ಕೈ ಕಳೆದುಕೊಂಡಿರುವ ವಿಕಲಚೇತನರಿಗೆ ಉಚಿತವಾಗಿ ಕೃತಕ ಕೈ ಜೋಡಣೆ ಶಿಬಿರ ದಿನಾಂಕ 19-01-2020 ರಂದು ಮಣಿಪಾಲ ರೋಟರಿ ಕ್ಲಬ್‍ನಲ್ಲಿ ಜರುಗಲಿದೆ.

ಕೃತಕ ಕೈ ಅವಶ್ಯಕತೆ ಇರುವ ಜಿಲ್ಲೆಯ ವಿಕಲಚೇತನರು ತಮ್ಮ ಹೆಸರುಗಳನ್ನು ರಾಜವರ್ಮ ಅರಿಗ ಮೊ:9448012539, ಡಾ.ಗಿರಿಜಾ ಮೋ.9845164118, ರವಿ ಕಾರಂತ ಮೊ:9900470590 ಹಾಗೂ ಜೈ. ವಿಠ್ಠಲ ಮೊ.9845540293 ಇವರಲ್ಲಿ ನೋಂದಣಿಮಾಡಿಕೊಳ್ಳಬೇಕು ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಮಠದ ಅವರು ತಿಳಿಸಿದ್ದಾರೆ.