ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವ್ಯಸಗಿದ ಆರೋಪಿಗೆ ಶಿಕ್ಷೆ

Share

ಹಾವೇರಿ: ಅಪ್ರಾಪ್ತ ಬಾಲಕಿ ಮೇಲೆ ದೌರ್ಜನ್ಯವ್ಯಸಗಿದ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಅಭಿಲಾಶ ಮಲ್ಲೇಶಪ್ಪ ಹರಿಕೇರಿ(16) ಈತನಿಗೆ ಒಂದನೇ ಅಧಿಕ ಜಿಲ್ಲಾ ಸತ್ರ(ಪೋಕ್ಸೊ) ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕಿರಣ್ ಕಿಣಿ ಅವರು ಮೂರು ವರ್ಷಗಳ ಸಾದಾ ಸಜೆ ಆದೇಶಿಸಿ ತೀರ್ಪು ನೀಡಿದ್ದಾರೆ.

ಜಿಲ್ಲೆಯ ರಟ್ಟೀಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬುಳ್ಳಾಪುರ ಗ್ರಾಮದ ಸಂತ್ರಸ್ಥೆಯ ತಂದೆ-ತಾಯಿ ಕೂಲಿ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಒಬ್ಬಳೇ ಮನೆಯಲ್ಲಿದ್ದಾಗ ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕನಾದ ಅವಳ ಸಹೋದರ ಸಂಬಂಧಿಯಾದ ಅಭಿಲಾಶ ಮಲ್ಲೇಶಪ್ಪಾ ಹರಿಕೇರಿ ಈತನು ಅಳೊಂದಿಗೆ ಸಲುಗೆಯಿಂದ ವರ್ತಿಸಿ ಅವಳ ವಿರೋಧಿಸಿದರು ಸಹ ಒತ್ತಾಯ ಪೂರ್ವಕವಾಗಿ ಲೈಂಗಿಕ ದೌರ್ಜನ್ಯ ವ್ಯಸಗಿದ್ದರಿಂದ ಅವಳು ಗರ್ಭವತಿಯಾಗಿ ದಿನಾಂಕ 10-08-2016 ರಂದು ಗಂಡು ಮಗುವಿಗೆ ಜನ್ಮ ನೀಡುವಂತಾಗಿದೆ. ಈತನ ಮೇಲೆ ರಟ್ಟೀಹಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಾಧ ದಾಖಲಿಸಿ, ಹಿರೇಕೆರೂರು ಆರಕ್ಷಕ ವೃತ್ತ ನಿರೀಕ್ಷಕರಾದ ಎಸ್.ಟಿ.ಯೋಗೇಶ ಅವರು ತನಿಖೆ ನಡೆಸಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕ/ ಆರೋಪಿತನ ಮೇಲೆ ಆರೋಪ ರುಜುವಾತಾದ ಕಾರಣ ದಿನಾಂಕ 18-10-2019 ರಂದು ಭಾ.ದಂ.ಸಂ. ಕಲಂ 376(2)(ಎನ್) ಐ.ಪಿ.ಸಿ. ಮತ್ತು ಕಲಂ 4 ಮತ್ತು 6 ಪೋಕ್ಸೋ ಕಾಯ್ದೆ-2012 ಅಡಿ ಆರೋಪಿಗೆ ಮೂರುವರ್ಷಗಳ ಸಾದಾ ಸಜೆ ಆದೇಶಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ (ಪೋಕ್ಸೋ) ವಿಶೇಷ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ವಿನಾಯಕ ಎಸ್.ಪಾಟೀಲ ವಾದ ಮಂಡಿಸಿದ್ದಾರೆ.